ಕೆಲ ದಿನಗಳ ಹಿಂದೆ ಕುಂಜಾಲುವಿನಲ್ಲಿ ನೆಡೆದ ಗೋಹತ್ಯೆ ವಿಚಾರವಾಗಿ ಧರ್ಮಗಳ ನಡುವೆ ದ್ವೇಷ ಹುಟ್ಟುವಂತೆ ಹೇಳಿಕೆಗಳನ್ನು ನೀಡಿದ್ದಾರೆಂದು ಉಡುಪಿ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವವೆಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಳಿಸಿಕೊಳ್ಳಲಾಗಿದೆ.
ಗುರುವಾರ ನಡೆದ ಮಾಧ್ಯಮ ಪ್ರಕಟಣೆಯಲ್ಲಿ ಕುಂಜಾಲು ಗೋಹತ್ಯೆ ವಿಚಾರವಾಗಿ ಶರಣ್ ಪಂಪ್ ವೆಲ್ “ಇದು ಕೇವಲ ಬಂಧಿತ 6 ಜನರ ಕೆಲಸವಲ್ಲ ಇದೊಂದು ವ್ಯವಸ್ಥಿತ ಮಾಫಿಯ ದಂಧೆ ಎಂದು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಗೋಹತ್ಯೆ ಪ್ರಕರಣದ ತನಿಖೆ ನೆಡೆಯುತ್ತಿರುವ ಸಂದರ್ಭದಲ್ಲಿ ಪುರಾವೆಗಳೇ ಇಲ್ಲದೇ ಸುಳ್ಳು ಮಾಹಿತಿಯನ್ನು ನೀಡಿ, ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟು ಮಾಡುತ್ತಿದ್ದಾರೆ ಎಂದು ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.