ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧ ಕೀಳು ಪದ ಬಳಕೆ ಪ್ರಕರಣ ಕ್ಷಣಕ್ಷಣಕ್ಕೂ ಕಾವೇರಿತ್ತಿದೆ. ಸಿಎಂ ಶಾಲಿನಿ ರಜನೀಶ್ ವಿರುದ್ಧ ಆಕ್ಷೇಪಾರ್ಹ ಪದ ಬಳಿಸಿದ್ದ ಬಿಜೆಪಿ ಎಂಎಲ್ ಸಿ ರವಿಕುಮಾರ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ.
ಈ ಎಫ್ಐಆರ್ ಪ್ರಶ್ನಿಸಿ, ರವಿಕುಮಾರ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತ ತುರ್ತು ವಿಚಾರಣೆಗೆ ರವಿಕುಮಾರ್ ಪರ ವಕೀಲ ಸುಯೋಗ್ ಹೇರಳೆ ಮನವಿ ಸಲ್ಲಿಸಿದ್ದಾರೆ. ಈ ಮನವಿ ಪರಿಗಣಿಸಿರುವ ಹೈಕೋರ್ಟ್, ಮಧ್ಯಾಹ್ನ 2.30ರ ನಂತ್ರ ತುರ್ತು ವಿಚಾರಣೆಗೆ ಸಮ್ಮತಿಸಿದೆ. ರವಿಕುಮಾರ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.