ಉಡುಪಿ: ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಮನೋಹರ ಪೈ ಅಂಕದಕಟ್ಟೆ ಅವರ ಸಹಭಾಗಿತ್ವದಲ್ಲಿ ಸಹಪಠ್ಯ ಚಟುವಟಿಕೆಗಳ ತರಗತಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕೆಪಿಎಸ್ ಪ್ರಾಥಮಿಕ ವಿಭಾಗದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಕೋಟೇಶ್ವರ ಶ್ರೀಧರ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲೆಯಲ್ಲಿ ಎಲ್ಲಿಯೂ ಪ್ರಾಥಮಿಕ ಶಾಲೆಯಲ್ಲಿ ನಡೆಸದೆ ಇರುವ 6 ಸಹಪಠ್ಯ ಚಟುವಟಿಕೆಗಳ ತರಬೇತಿ ತರಗತಿಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಇದರ ನೇತಾರರಾಗಿರುವ ಮನೋಹರ ಪೈ ಮತ್ತು ಅವರ ತಂಡಕ್ಕೆ, ಶಾಲೆಯ ಮುಖ್ಯಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿತ್ತೇನೆ ಎಂದರು.
ನಮ್ಮ ಶಾಲಾ ಮಕ್ಕಳು ನಿಜಕ್ಕೂ ಪುಣ್ಯವಂತರು ಮಕ್ಕಳು ಯಾವುದೇ ಧರ್ಮದವರು ಇದ್ದರೂ ಅವರೆಲ್ಲರಿಗೂ ಸಂಸ್ಕಾರ ಅಗತ್ಯ. ಆ ಸಂಸ್ಕಾರವನ್ನು ನಮಗೆ ನಮ್ಮ ಶಿಕ್ಷಕರು ಕಲಿಸಿದ್ದರಿಂದಾಗಿ ನಾವು ಇಂದು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ಮನೋಹರ ಪೈ ಅಂಕದಕಟ್ಟೆ ಮಾತನಾಡಿ, ಈ ತರಗತಿಗಳನ್ನು ನೆಡೆಸಬೇಕು ಎನ್ನುವುದು ನನ್ನ ಕನಸು ಆಗಿತ್ತು. ಇದಕ್ಕೆ ಮುಖ್ಯ ಶಿಕ್ಷಕರು ಮತ್ತು ಶಾಲಾ ಸಮಿತಿಯವರು ಅವಕಾಶ ಮಾಡಿಕೊಟ್ಟಿರುವುದಕ್ಕೆ ಅಭಿನಂದಗಳು ಎಂದರು. ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಸಹಪಠ್ಯ ಒಟ್ಟೊಟ್ಟಿಗೆ ಸಿಕ್ಕಿದಾಗ ಖುಶಿಯಿಂದ ಅಭ್ಯಾಸ ಮುಂದುವರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ರೂವಾರಿಯಾಗಿ ಮುಖ್ಯ ಶಿಕ್ಷಕರಾದ ಚಂದ್ರ ನಾಯ್ಕ್ ಎಚ್ ರವರು ಮುನ್ನೆಲೆಯಲ್ಲಿದ್ದರು , ಎಸ್ ಡಿಎಂಸಿ ಸದಸ್ಯರಾದ ಅನುರಾಧ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಹಾಲಾಡಿ ಕೃಷ್ಣ ಕಾಮತ್, ಕಡ್ಲೆ ಗಣಪತಿ ಭಟ್, ರೂಪೇಶ್ ವಡೇರಹೋಬಳಿ, ಸುಮನಾ ಪಿ.ಪೈ, ರೇವತಿ ಕೊಡಿ, ರವೀಂದ್ರ ಕೋಡಿ ಸೇರಿದಂತೆ ಹಲವರು ಇದ್ದರು.