ಚಿತ್ರದುರ್ಗ: ಮೆದೆಹಳ್ಳಿ ಗ್ರಾಮದಲ್ಲಿ ಮುಖಕ್ಕೆ ಮುಸುಕು ಧರಿಸಿ ಕಳ್ಳರು ಕೈ ಚಳಕ ತೋರಿಸಿರುವ ಘಟನೆ ನಡೆದಿದೆ.
ರಾತ್ರೋ ರಾತ್ರಿ ವೇಳೆ ಕಳ್ಳತನಕ್ಕೆ ಇಳಿದು ಐವರ ಗ್ಯಾಂಗ್ ಓಡಾಟ ನಡೆಸಿದೆ. ಖದೀಮರ ಗ್ಯಾಂಗ್ ಕಾಣುತ್ತಿದ್ದಂತೆ ನಾಯಿಗಳು ಬೊಗಳಿವೆ. ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಳ್ಳತನಕ್ಕೆ ಬಂದಿದ್ದ ಕಳ್ಳರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಿತ್ರದುರ್ಗ ತಾಲೂಕಿನ ಮೆದೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.