ಬೆಂಗಳೂರು: ಎಣ್ಣೆ ಏಟಿನಲ್ಲಿ ಪೊಲೀಸರನ್ನೇ ತಳ್ಳಾಡಿರುವ ಘಟನೆಯೊಂದು ನಡೆದಿದೆ.
ಮೂವರು ಯುವಕರು ಪೊಲೀಸರೊಂದಿಗೆ ಕಿರಿಕ್ ಮಾಡಿದ್ದು, ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ವರುಣ್, ಶರಣ್, ನಿರಂಜನ್ ಎಂಬ ಯುವಕರು ಪೊಲೀಸರೊಂದಿಗೆ ಕಿರಿಕ್ ಮಾಡಿದ್ದಾರೆ.
ಜೂನ್ 29ರಂದು ಡ್ರಿಂಕ್ ಡ್ರೈವ್ ಚೆಕ್ ಮಾಡುತ್ತಿದ್ದ ವೇಳೆ ಅಶೋಕ್ ನಗರ ಟ್ರಾಫಿಕ್ ಪೊಲೀಸರೊಂದಿಗೆ ಕಿರಿಕ್ ಮಾಡಿದ್ದಾರೆ. ಪೊಲೀಸರು ಠಾಣಾ ವ್ಯಾಪ್ತಿಯಲ್ಲಿನ ಕೊರ್ನಾಕ್ ಹೋಟೆಲ್ ಮುಂಭಾಗ ಚೆಕ್ಕಿಂಗ್ ಮಾಡುತ್ತಿದ್ದರು. ಈ ವೇಳೆ ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ಕಾರು ಚಾಲಕ ಶರಣ್ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಆಗ ಚಾಲಕನಿಗೆ ನೋಟಿಸ್ ನೀಡಿ ಕಾರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.
ಆದರೆ, ಕಾರಿನಲ್ಲಿದ್ದ ವರುಣ್, ನಿರಂಜನ್ ಹಾಗೂ ಶರಣ್ ಪೊಲೀಸರ ಜೊತೆ ಕಿರಿಕ್ ಮಾಡಿ ಅವಾಚ್ಯವಾಗಿ ನಿಂದಿಸಿ, ಪೊಲೀಸರನ್ನೇ ತಳ್ಳಾಡಿದ್ದಾರೆ. ಅಲ್ಲದೇ, ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.