ಬೆಂಗಳೂರು: ಸ್ಪೋರ್ಟ್ಸ್ ಪ್ರಾಕ್ಟೀಸ್ ನೋಡಲು ಬಂದಿದ್ದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
13 ವರ್ಷದ ಡಿಮನ್ ರಾಜ್ ನಾಪತ್ತೆಯಾಗಿರುವ ಬಾಲಕ ಎನ್ನಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿಯನ್ನು ಗೊರಗುಂಟೆ ಪಾಳ್ಯ ನಿವಾಸಿ ಎನ್ನಲಾಗಿದೆ. ಈ ವಿದ್ಯಾರ್ಥಿ 7ನೇ ತರಗತಿಯಲ್ಲಿ ಓದುತ್ತಿದ್ದ. ಎಂದಿನಂತೆ ಬೆಳಗ್ಗೆ ಮನೆಯಿಂದ ಟ್ಯೂಷನ್ ಗೆ ವಿದ್ಯಾರ್ಥಿ ಹೋಗಿದ್ದ. ಆದರೆ, ಟ್ಯೂಷನ್ ಮುಗಿಯುತ್ತಿದ್ದಂತೆ ಕಂಠೀರವ ಸ್ಟೇಡಿಯಂಗೆ ಹೋಗಿದ್ದಾನೆ.
0ಕಂಠೀರವ ಸ್ಟೇಡಿಯಂನಲ್ಲಿ ಜಾವೆಲಿನ್ ಥ್ರೋ ಪ್ರಾಕ್ಟೀಸ್ ನೋಡಲು ಬಾಲಕ ಹೋಗಿದ್ದ ಎನ್ನಲಾಗಿದೆ.
ಸ್ಟೇಡಿಯಂನಲ್ಲಿ ನೀರಜ್ ಚೋಪ್ರಾ ಜೊತೆ ಪೋಟೊ ಕೂಡ ತೆಗೆಸಿಕೊಂಡಿದ್ದಾನೆ. ಅಲ್ಲಿದ್ದ ವ್ಯಕ್ತಿಯೊಬ್ಬರ ಮೂಲಕ ತನ್ನ ಫೋಟೋವನ್ನು ತಾಯಿಗೂ ಕಳುಹಿಸಿದ್ದಾನೆ. ಆನಂತರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ. ಈ ಕುರಿತು ಪೋಷಕರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.