ಬೆಂಗಳೂರು: ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಆಟೋ ಪ್ರಯಾಣ ದರ ಏರಿಕೆಯಾಗಿದೆ.
ಈಗ ಬೇಕಾಬಿಟ್ಟಿಯಾಗಿ ಖಾಸಗಿ ಅಗ್ರಿಗೇಟರ್ ಕಂಪನಿಗಳು ವಸೂಲಿ ಮಾಡುತ್ತಿವೆ. ಓಲಾ, ಊಬರ್ ಸೇರಿದಂತೆ ಅಗ್ರಿಗೇಟರ್ ಕಂಪೆನಿಗಳು ಮೂರು ಪಟ್ಟು ಹೆಚ್ಚು ವಸೂಲಿ ಮಾಡುತ್ತಿವೆ.
ಉದಾಹಾರಣೆಗೆ 2 ಕಿ.ಮೀ ಅಂತರದ ಪ್ರಯಾಣಕ್ಕೆ ನಿಯಮದಂತೆ 30 ರಿಂದ 35 ರೂ. ತೆಗೆದುಕೊಳ್ಳಬೇಕು. ಆದರೆ, ಕಂಪನಿಗಳು 98 ರೂ. ಪಡೆಯುತ್ತಿವೆ. ಇದೇ ರೀತಿ ಹಲವೆಡೆ ಬೇಕಾಬಿಟ್ಟಿಯಾಗಿ ವಸೂಲಿ ಮಾಡುತ್ತಿವೆ.
ಕಾರ್ಪೊರೇಷನ್ ಸರ್ಕಲ್ to ಎಂಜಿ ರಸ್ತೆ – 2.2km – 98 ರೂ.
ಕಾರ್ಪೋರೇಷನ್ ಸರ್ಕಲ್ to ಶಿವಾನಂದ ಸರ್ಕಲ್ – 2.5km – 104 ರೂ.
ಕಾರ್ಪೊರೇಷನ್ ಸರ್ಕಲ್ to ಕೆಆರ್ ಮಾರ್ಕೆಟ್ – 1.5km – 89 ರೂ.
ಕಾರ್ಪೊರೇಷನ್ ಸರ್ಕಲ್ to ಮೆಜೆಸ್ಟಿಕ್ ಬಸ್ ನಿಲ್ದಾಣ – 2km – 89 ರೂ.
ಆದರೆ, 2 ಕಿ.ಮೀ ಪ್ರಯಾಣಕ್ಕೆ ಸಾರಿಗೆ ಇಲಾಖೆಯಿಂದ 30 ರೂ. ದರ ನಿಗದಿಯಾಗಿದೆ. ನಂತರದ ಪ್ರತಿ ಕಿ.ಮೀಗೆ 15 ರೂ. ದರ ಏರಿಕೆಯಾಗಬೇಕು. ಆದರೆ, ಸಾರಿಗೆ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವಸೂಲಿ ಮಾಡಲಾಗುತ್ತದೆ.