ಪೋಷಕರ ನಿರ್ಲಕ್ಷ್ಯಕ್ಕೆ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ಪಟ್ಟಣ ವ್ಯಾಪ್ತಿಯ ಆಝಾದ್ ನಗರದಲ್ಲಿ ನಡೆದಿದೆ. ಆಟವಾಡುತಿದ್ದ ಎರಡು ವರ್ಷದ ಹೆಣ್ಣುಮಗು ನಾಲೆಗೆ ಬಿದ್ದು ಸಾವನ್ನಪ್ಪಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಹೆಣ್ಣುಮಗು ಶನಿವಾರ ಮಧ್ಯಾಹ್ನದ ವೇಳೆ ಮನೆಯ ಹೊರಗೆ ಆಟವಾಡುತಿದ್ದ ವೇಳೆ ಎದುರಿಗಿದ್ದ ಕಾಲುವೆಯೊಳಗೆ ಬಿದ್ದಿದೆ. ಕೂಡಲೇ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.


















