ಕ್ರಿಕೆಟಿಗ ರಿಂಕು ಸಿಂಗ್ ಸಂಸದೆ ಪ್ರಿಯಾ ಸರೋಜ್‌ಗೆ ರಿಂಗ್ ತೊಡಿಸಿ ಎಂಜೇಜ್ ಆಗಿದ್ದಾರೆ. ಇದೀಗ ಪ್ರಿಯಾ ಹಿನ್ನೆಲೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಜನ್ಸ್ ಸರ್ಚಿಂಗ್ ಶುರು ಮಾಡಿದ್ದಾರೆ. ನವೆಂಬರ್ 28, 1998 ರಂದು ಜನಿಸಿರುವ ಪ್ರಿಯಾಗೆ ಈಗಷ್ಟೇ 26 ವರ್ಷ. ಲೋಕಸಭೆಗೆ ಎಂಟ್ರಿ ಕೊಟ್ಟ ದೇಶದ 2ನೇ ಅತೀ ಕಿರಿಯ ಸಂಸದೆ ಅನ್ನೋ ಬಿರುದಿಗೆ ಪ್ರಿಯಾ ಪಾತ್ರರಾಗಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯ ತೂಪಾನಿ ಸರೋಜ್‌ಗೆ ಪ್ರಿಯಾ ಅವರ ತಂದೆ. ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ತೂಪಾನಿ ಸರೋಜ್, ಸದ್ಯ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪ್ರಿಯಾ, ದೆಹಲಿಯ ಏರ್ ಪೋರ್ಸ್ ಗೋಲ್ಡನ್ ಜ್ಯಬಿಲಿ ಇನ್‌ಸ್ಟಿಟ್ಯೂಟ್ ನಲ್ಲಿ ಪೂರೈಸಿದ್ದಾರೆ. ಬಳಿಕ ದೆಹಲಿ ವಿವಿಯಲ್ಲಿ ಬಿಎ ಪದವಿ ಮುಗಿಸಿ ಅಮಿಟಿ ಯೂನಿವರ್ಸಿಟಿಯಲ್ಲಿ ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿದ್ದಾರೆ. ಅಪ್ಪನ ರಾಜಕೀಯ ಗರಡಿಯಲ್ಲಿ ಪಳಗಿದ ಪ್ರಿಯಾ, ಕಳೆದ ಎಲೆಕ್ಷನ್‌ನಲ್ಲಿ ಮಚ್ಚಲಿ ಶಹರ್ ಅನ್ನೋ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಎಲೆಕ್ಟ್ ಆಗಿದ್ದಾರೆ. ಇದೀಗ ರಿಂಕು ಸಿಂಗ್ ಬಾಳ ಸಂಗಾತಿ ಆಗಲಿದ್ದಾರೆ.
ಕಡು ಬಡತನದಲ್ಲಿ ಅರಳಿದ ರಿಂಕು!
ಕ್ರಿಕೆಟರ್ ರಿಂಕು ಸಿಂಗ್ ಆಕ್ಟೋಬರ್ 12, 1997 ರಂದು ಜನಿಸಿದ್ದು, ಕ್ರಿಕೆಟನ್ನೇ ತಮ್ಮ ಉಸಿರು ಆಗಿಸಿಕೊಂಡಿದ್ದಾರೆ. ಕಡು ಬಡತನದಲ್ಲೇ ಬೆಳೆದ ರಿಂಕು ಸಿಂಗ್, ಕ್ರಿಕೆಟ್ ತಾರೆಯಾಗಿ ಹೊರ ಹೊಮ್ಮಿದ್ದಾರೆ. ಇನ್ನು ರಿಂಕು ಸಿಂಗ್ ತಂದೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡುತ್ತಾ ಮಕ್ಕಳನ್ನು ಬೆಳೆಸಿದ್ದಾರೆ. ಅಪ್ಪನ ಶ್ರಮಕ್ಕೆ ತಕ್ಕ ಪ್ರತಿಫಲ ಕೊಟ್ಟ ರಿಂಕು, 2023 ಆಗಸ್ಟ್‌ನಲ್ಲಿ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಐರ್ಲೆಂಡ್ ವಿರುದ್ಧ ಮೊದಲ ಮ್ಯಾಚ್ ಆಡಿದ್ದರು. ಆ ಬಳಿಕ ಒಂದೊಂದೆ ಮೆಟ್ಟಿಲು ಏರಿ ಇಂಡಿಯಾ ತಂಡಕ್ಕೂ ಸೆಲೆಕ್ಟ್ ಆಗಿದ್ರು. ಸದ್ಯ ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ರಿಂಕು ಸಿಂಗ್ ಆಟ ಆಡ್ತಿದ್ದಾರೆ. ಕಡು ಬಡತನದಲ್ಲೇ ಬೆಳೆದ ರಿಂಕು ಸಿಂಗ್ , ಇದೀಗ ಸಂಸದೆ ಪ್ರಿಯಾಳ ಕೈ ಹಿಡಿಯಲಿದ್ದಾರೆ.