ಬೆಂಗಳೂರು: ಮುಂದಿನ ವರ್ಷದಿಂದ ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ಟ್ರಾಫಿಕ್ ಬಗ್ಗೆ ಪಾಠ ಅಳವಡಿಸಲು ನಿರ್ಧರಿಸಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದೆ. ಈಗಾಗಲೇ ರಸ್ತೆ ಸುರಕ್ಷತೆ ಬಗ್ಗೆ ಮತ್ತು ಟ್ರಾಫಿಕ್ ಬಗ್ಗೆ ಪಠ್ಯ ಅಳವಡಿಕೆಗೆ ತಯಾರಿ ನಡೆಸಲಾಗಿದೆ. ಈ ಪಠ್ಯ ಕ್ರಮವನ್ನು ಟ್ರಾಫಿಕ್ ಪೊಲೀಸರು ಸಿದ್ಧಪಡಿಸಲಿದ್ದಾರೆ. 2025-26ನೇ ಸಾಲಿನ ಪಠ್ಯ ಕ್ರಮದಲ್ಲಿ ಪಾಠವನ್ನು ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ.
2,4 6,7,9ನೇ ತರಗತಿಯ ಮಕ್ಕಳಿಗೆ ಸಂಚಾರ ಸುರಕ್ಷತೆ ಕುರಿತು ಪಠ್ಯ ಸೇರಿಸಲು ಚಿಂತನೆ ನಡೆದಿದೆ. ಟ್ರಾಫಿಕ್ ಲೈಟ್, ಟ್ರಾವೆಲ್, ವೈಯುಕ್ತಿಕ ಸುರಕ್ಷತೆ, ರೋಡ್ ಸೆಫ್ಟಿ, ಸಡಕ್ ಕೀ ರಕ್ಷಾ ಸಬ್ ಕೀ ಸುರಾಕ್ಷ ಅಧ್ಯಾಯಗಳನ್ನು ಅಳವಡಿಸಲಾಗುವುದು.