ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಸಿಐಡಿ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಕೆಎಸ್ ಸಿಎ ಕಾರ್ಯದರ್ಶಿ ಎ.ಶಂಕರ್ ಹಾಗೂ ಖಜಾಂಚಿ ಇ.ಎಸ್. ಜಯರಾಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗ ಒತ್ತಡ ಶುರುವಾಗಿದೆ. ನೀವು ಅದೇ ಸ್ಥಾನದಲ್ಲಿದ್ದು ಪೊಲೀಸರ ತನಿಖೆಗೆ ಸಹಕರಿಸಿ ಎಂದು ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಕೆಎಸ್ ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಈಗಾಗಲೇ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆಯನ್ನೂ ಜೂನ್ 16ಕ್ಕೆ ಮುಂದೂಡಿದೆ.