ನಿನ್ನೆ ಕಾಲ್ತುಳಿತದಲ್ಲಿ ಪ್ರಾಣತೆತ್ತವರ ಮೃತದೇಹ ಸಾಗಿಸಲು ಅನುವು ಮಾಡಿಕೊಡಲಾರದಷ್ಟು ಕಟುಕವಾಯ್ತೇ? ಸರ್ಕಾರ.
ಹೌದು! ನಿನ್ನೆ ಮೃತಪಟ್ಟಿದ್ದ ಕೋಲಾರದ ಸಹನಾಳ ಮೃತದೇಹವನ್ನು ಬಿಬಿಎಂಪಿ ಶ್ರದ್ಧಾಂಜಲಿ ವಾಹನದಲ್ಲಿ ಸ್ಥಳಾಂತರಿಸಲು ಮುಂದಾಗಿತ್ತು. ಫ್ರೀಜರ್ ಇಲ್ಲದ ವಾಹನದಲ್ಲಿ ಶವ ಸ್ಥಳಾಂತರಿಸಲು ಮುಂದಾಗಿದ್ದ ಅಧಿಕಾರಗಳ ನಿಲುವಿನ ವಿರುದ್ಧ ಸಹನಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಬಿಎಂಪಿ ವಾಹನ ಬದಲಿಸಿ ಬೇರೆ ವಾಹನವನ್ನು ನೀಡಲಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.