ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಂಕು ಸಿಂಗ್ ಕಲ್ಯಾಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಳೆದ ಕೆಲ ತಿಂಗಳುಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಗಳಿಗೆ ರಿಂಕು ಇದೀಗ ತಾರ್ಕಿಕ ಉತ್ತರ ನೀಡಿದ್ದಾರೆ. ಇದೇ ಜೂನ್ 8ರ ಭಾನುವಾರ ರಿಂಕು ಸಿಂಗ್ ನಿಶ್ಚಿತಾರ್ಥ ನಡೆಯಲಿದೆ.
ರಿಂಕು ಕೈ ಹಿಡಿಯುತ್ತಿರುವ ಆ ಸುಂದರಿ ಯಾರು ಅನ್ನೋ ಪ್ರಶ್ನೆ ಹಲವರಲ್ಲಿತ್ತು. ಆದರೀ ಇದಕ್ಕೆಲ್ಲಾ ಪೂರ್ಣ ವಿರಾಮವನ್ನಿಟ್ಟಿರುವ ರಿಂಕ್, ಉತ್ತರ ಪ್ರದೇಶ ಮೂಲದ ಸಂಸದೆ ಪ್ರಿಯಾ ಸರೋಜ್ ರನ್ನು ಕೈ ಹಿಡಿಯಲಿದ್ದಾರೆ.
ರಿಂಕ್ ಕೈ ಹಿಡಿಯಲಿರುವ ಪ್ರಿಯಾ ಸರೋಜ್ ಯಾರು?
ಪ್ರಿಯಾ ಸರೋಜ್, ಲೋಕಸಭೆಯ ಅಂತ್ಯತ ಕಿರಿಯ ಸದಸ್ಯೆ. ಉತ್ತರ ಪ್ರದೇಶದ ಮಚಲಿ ಶಹರ್ ನ ಸಂಸದೆಯಾಗಿರುವ ಪ್ರಿಯಾ ಇದೀಗ ರಿಂಕು ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಕೇವಲ 26 ವರ್ಷಕ್ಕೆ ಸಂಸತ್ ಪ್ರವೇಶಿಸಿದ ಕೀರ್ತಿ ಪ್ರಿಯಾ ಅವರದ್ದು. ಮೂಲತ ರಾಜಕೀಯ ಹಿನ್ನಲೆಯ ಕುಟುಂಬದಿಂದ ಬಂದ ಪ್ರಿಯಾ ತಂದೆ, ತೂಫಾನ್ ಸರೋಜ್ ಮೂರು ಬಾರಿ ಮಚಲಿ ಶಹರ್ ನ ಸಂಸದರಾಗಿದ್ದರು. ಇದೀಗ ಕ್ಷೇತ್ರವನ್ನು ಮಗಳಿಗೆ ಬಿಟ್ಟುಕೊಟ್ಟು ತಾವು ಶಾಸಕರಾಗಿದ್ದಾರೆ. ಕಾನೂನು ಪದವೀಧರೆಯಾಗಿರುವ ಪ್ರಿಯಾ ಸಂಸದೆಯಾಗೋ ಮುನ್ನ ಸುಪ್ರೀಂ ಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು.
ರಿಂಕು-ಪ್ರಿಯಾ ಪ್ರೇಮ ಚರಣಕ್ಕೀಗ ಕಲ್ಯಾಣ ರಾಗ
ಹಾಗೆ ನೋಡಿದರೆ ಕಳೆದ ಕೆಲವು ತಿಂಗಳಿಂದ ರಿಂಕು ಮತ್ತು ಪ್ರಿಯಾರ ಪ್ರೇಮ ಕಹಾನಿ ಭರ್ಜರಿ ಗುಲ್ಲೆದ್ದಿತ್ತು. ಆದರೆ ಈ ಬಗ್ಗೆ ಸ್ಫೋಟಕ ದಾಂಡಿಗ ತುಟಿ ಪಿಟಿಕ್ ಅಂದಿರಲಿಲ್ಲ. ಆದರೆ, ರಿಂಕ್ ಮತ್ತು ಮತ್ತು ಪ್ರಿಯಾ ಕೆಲ ವರ್ಷಗಳಿಂದ ಪ್ರೇಮದ ರಥದಲ್ಲಿ ಮೆರವಣಿಗೆ ಹೊರಟಿದ್ದು ಸುಳ್ಳಲ್ಲ. ಈದೀಗ ಅಂತಿಮವಾಗಿ ಇಬ್ಬರೂ ತಮ್ಮ ಕುಟುಂಬಗಳ ಅನುಮತಿ ಪಡೆದು ಹಣೆಮಣೆ ಏರಲಿ ಸಜ್ಜಾಗಿದ್ದಾರೆ. ಜೂನ್ 8 ರಂದು ಲಖನೌನಲ್ಲಿ ನಿಶ್ಚಿತಾರ್ಥ ನಡೆಯಲಿದೆ.
ಇಬ್ಬರೂ ಪರಸ್ಪರ ಉಂಗುರ ಬದಲಿಸಿಕೊಳ್ಳಲು ಭರ್ಜರಿ ತಯಾರಿ ನಡೆದಿದೆ. ಇನ್ನು ನವೆಂಬರ್ 18ರ ಶುಭ ಮುಹೂರ್ತದರಲ್ಲಿ ವಾರಣಸಿಯ ಐಷಾರಾಮಿ ತಾಜ್ ಹೋಟೆಲ್ ನಲ್ಲಿ ರಿಂಕು-ಪ್ರಿಯಾ ಅದ್ಧೂರಿ ಕಲ್ಯಾಣ ನಡೆಯಲಿದೆ. ಈ ಸಮಾರಂಭದಲ್ಲಿ ಟೀಂ ಇಂಡಿಯಾದ ಹಲವು ತಾರೆಗಳು ಪಾಲ್ಗೊಳ್ಳೋ ನಿರೀಕ್ಷೆಯಿದೆ. ಈ ಬಾರಿ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದ ರಿಂಕು ಹೇಳಿಕೊಳ್ಳುವಂಥಾ ಆಟವನ್ನು ಪ್ರದರ್ಶಿಸಿಲ್ಲ. 14 ಪಂದ್ಯಗಳಿಂದ ಕೇವಲ 206 ರನ್ ಕಲೆಹಾಕಿದ್ದಾರೆ.



















