ಮುಲ್ಲನ್‌ಪುರ: ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ಅವರ ಪತ್ನಿ ರಿಯಾನ್ನಾ ಜೆನ್ನಿಫರ್ ಕ್ಯಾಂಟರ್ ಅವರ ಸ್ಫೋಟಕ ಪ್ರತಿಕ್ರಿಯೆಯೊಂದು ವೈರಲ್ ಆಗಿದೆ. ಐಪಿಎಲ್ 2025 ರ ಕ್ವಾಲಿಫೈಯರ್ 1 ಪಂದ್ಯದ ಸಮಯದಲ್ಲಿ ಅದು ರೆಕಾರ್ಡ್ ಆಗಿದೆ. ಪಂಜಾಬ್ ತಂಡದ ವಿರುದ್ಧ ಆರ್‌ಸಿಬಿ ಅಮೋಘ ಜಯ ಸಾಧಿಸಿದ ವೇಳೆ ಈ ವಿಡಿಯೊ ರೆಕಾರ್ಡ್ ಆಗಿದೆ.
ಐಪಿಎಲ್ 2025 ರ ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ತಂಡವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಿತ್ತು, ಮತ್ತು ಮಾರ್ಕಸ್ ಸ್ಟೋಯಿನಿಸ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಫಾರ್ಮ್‌ನಲ್ಲಿರಲಿಲ್ಲ. ಆರ್‌ಸಿಬಿ ಬೌಲರ್‌ಗಳು ಪಿಬಿಕೆಎಸ್ ಬ್ಯಾಟ್ಸ್‌ಮನ್‌ಗಳಿಗೆ ಕಾಡಿದರು.
ಆಲ್-ರೌಂಡರ್ ಮಾರ್ಕಸ್ ಸ್ಟೋಯಿನಿಸ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಅವರು ಉತ್ತಮ ಆರಂಭ ಮಾಡಿದೆರು. ಆರ್‌ಸಿಬಿ ಬೌಲರ್‌ಗಳನ್ನು ಎದುರಿಸುವಾಗ ಆರಾಮವಾಗಿ ಕಾಣುತ್ತಿದ್ದರು ಮತ್ತು ಆಕ್ರಮಣಕಾರಿ ಶೈಲಿಯ ಕ್ರಿಕೆಟ್ ಆಡಿದರು. ಆದರೆ, ಅವರು ತಮ್ಮ ಉತ್ತಮ ಆರಂಭವನ್ನು ದೊಡ್ಡ ಸ್ಕೋರ್‌ಗೆ ಪರಿವರ್ತಿಸಲು ಸಾಧ್ಯವಾಗಲಿಲ್ಲ. 11ನೇ ಓವರ್‌ನಲ್ಲಿ 17 ಎಸೆತಗಳಲ್ಲಿ 26 ರನ್‌ಗಳಿಗೆ ಔಟಾದರು, ಇದರಲ್ಲಿ ಎರಡು ಫೋರ್ ಮತ್ತು ಎರಡು ಸಿಕ್ಸರ್‌ಗಳು ಸೇರಿವೆ.
ರಿಯಾನ್ನಾ ಜೆನ್ನಿಫರ್ ಕ್ಯಾಂಟರ್ ವೈರಲ್
11ನೇ ಓವರ್‌ನ ಮೂರನೇ ಎಸೆತದಲ್ಲಿ, ಆರ್‌ಸಿಬಿ ಲೆಗ್-ಸ್ಪಿನ್ನರ್ ಸುಯಾಶ್ ಶರ್ಮಾ ಮಾರ್ಕಸ್ ಸ್ಟೋಯಿನಿಸ್‌ಗೆ ಗೂಗ್ಲಿ ಎಸೆದರು. ಸ್ಟೋಯಿನಿಸ್ ಅದನ್ನು ಅಬ್ಬರದಲ್ಲಿ ಆಡಲು ಪ್ರಯತ್ನಿಸಿ ಬೌಲ್ಡ್ ಆದರು. ಮಾರ್ಕಸ್ ಸ್ಟೋಯಿನಿಸ್ ಕಳಪೆ ಶಾಟ್ ಆಡಿ ಔಟಾದುದನ್ನು ಮತ್ತು ಪಂಜಾಬ್ ಕಿಂಗ್ಸ್ 78 ರನ್‌ಗಳಿಗೆ ತಮ್ಮ 8ನೇ ವಿಕೆಟ್ ಕಳೆದುಕೊಂಡುದನ್ನು ನೋಡಿ, ಸ್ಟ್ಯಾಂಡ್‌ಗಳಲ್ಲಿ ಇದ್ದ ರಿಕಿ ಪಾಂಟಿಂಗ್ ಅವರ ಪತ್ನಿ ರಿಯಾನ್ನಾ ಜೆನ್ನಿಫರ್ ಕ್ಯಾಂಟರ್ ತೀವ್ರ ಕೋಪಗೊಂಡು “ಫ*** ನೋ” ಎಂದು ಜೋರಾಗಿ ಕೂಗಿದರು.
ರಿಯಾನ್ನಾ ಜೆನ್ನಿಫರ್ ಕ್ಯಾಂಟರ್ ಈ ಋತುವಿನಲ್ಲಿ ಗಮನ ಸೆಳೆದಿದ್ದಾರೆ, ಏಕೆಂದರೆ ಅವರು ಪಂಜಾಬ್ ಕಿಂಗ್ಸ್‌ನ ಬೆಂಬಲಿಗರಾಗಿದ್ದಾರೆ ಮತ್ತು ಬಹುತೇಕ ಎಲ್ಲಾ ಪಂದ್ಯಗಳಿಗೆ ಹಾಜರಾಗಿದ್ದಾರೆ. ಅವರ ಈ ಆಕ್ರೋಶದ ಪ್ರತಿಕ್ರಿಯೆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



















