ಭಾರತ ಹಾಗೂ ಪಾಕಿಸ್ಥಾನ ನಡುವೆ ಏರ್ಪಟ್ಟಿದ್ದ ಸಂಘರ್ಷದ ಹಿನ್ನೆಲೆಯಲ್ಲಿ, ದೇಶದಲ್ಲಿನ 32 ಪ್ರಮುಖ ವಿಮಾನ ನಿಲ್ದಾಣಗಳಿಂದ ವಿಮಾನಯಾನ ಸ್ಥಗಿತಗೊಳಿಸಲಾಗಿತ್ತು. ಇದೀಗ ಕದನ ವಿರಾಮ ಘೋಷಣೆ ಬೆನ್ನಲ್ಲೇ ಸ್ಥಗಿತಗೊಂಡಿದ್ದ 32 ವಿಮಾನ ನಿಲ್ದಾಣಗಳು ತಮ್ಮ ಕಾರ್ಯವನ್ನು ಪುನಾರಂಭ ಮಾಡಿದೆ.
ಹರಿಯಾಣ, ರಾಜಸ್ಥಾನ, ಜಮ್ಮು ಕಾಶ್ಮೀರ, ಗುಜರಾತ್, ಉತ್ತರಪ್ರದೇಶ ಹೀಗೆ ಕೆಲ ಗಡಿಭಾಗದ ರಾಜ್ಯಗಳಿಂದ ವಿಮಾನ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ವಿಮಾನಯಾನ ಸಚಿವಾಲಯ ಕದನ ವಿರಾಮ ಘೋಷಣೆ ಬೆನ್ನಲ್ಲೇ ನಿನ್ನೆಯಿಂದ ಎಲ್ಲಾ 32 ವಿಮಾನ ನಿಲ್ದಾಣಗಳಿಂದ ವಿಮಾನ ಹಾರಾಟ ಶುರು ಮಾಡಿಸಿದೆ.