ಬೆಂಗಳೂರು: ಆ್ಯಪಲ್ ಕಂಪನಿಯ ಐಫೋನ್ ಹಾಗೂ ಐಪ್ಯಾಡ್ ಗಳನ್ನು ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಐಫೋನ್ ಹಾಗೂ ಐಪ್ಯಾಡ್ ಗಳನ್ನು ಹ್ಯಾಕರ್ ಗಳು ಹ್ಯಾಕ್ ಮಾಡುವ ಸಾಧ್ಯತೆ ಇರುವುದರಿಂದ ಬಳಕೆದಾರರು ಎಚ್ಚರದಿಂದ ಇರಬೇಕು ಎಂಬುದಾಗಿ ಕೇಂದ್ರ ಸರ್ಕಾರ ಸೂಚಿಸಿದೆ. ಹಾಗಾಗಿ, ಗ್ರಾಹಕರು ಅನಾಮಧ್ಯೇಯ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದಾಗಲಿ, ಅಪರಿಚಿತ ಆಪ್ ಗಳನ್ನು ಇನ್ ಸ್ಟಾಲ್ ಮಾಡುವುದಾಗಲಿ ಮಾಡಬಾರದು ಎಂದು ಎಚ್ಚರಿಸಲಾಗಿದೆ.
ಆ್ಯಪಲ್ ಕಂಪನಿಯು ದೋಷಗಳನ್ನು ಸರಿಪಡಿಸಲು ಹೊಸ ಅಪ್ ಡೇಟ್ ಗಳನ್ನು ಬಿಡುಗಡೆ ಮಾಡಿದೆ. ನಿಮ್ಮ iOS ಅಥವಾ iPadOS ಅನ್ನು ತಕ್ಷಣವೇ ಅಪ್ಡೇಟ್ ಮಾಡಬೇಕು. ನಿಮಗೆ ಗೊತ್ತಿಲ್ಲದ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಬಾರದು. ನಿಮ್ಮ ಸಾಧನವು ಅನುಮಾನಾಸ್ಪದವಾಗಿ ವರ್ತಿಸಿದರೆ ಎಚ್ಚರದಿಂದ ಇರಬೇಕು ಎಂಬುದಾಗಿ ಸೂಚಿಸಲಾಗಿದೆ.
ಹ್ಯಾಕರ್ ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಇಲ್ಲವೇ, ಹಣಕಾಸಿನ ಮಾಹಿತಿಯನ್ನುಕದ್ದು, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಎಗರಿಸಬಹುದು. ಇಲ್ಲವೆ, ಮೊಬೈಲ್ ನ ಭದ್ರತಾ ವ್ಯವಸ್ಥೆಯನ್ನು ಹಾಳುಮಾಡಬಹುದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಡೀ ಮೊಬೈಲ್ ಅನ್ನು ಹಾಳುಮಾಡಬಹುದು.
ಭಾರತದಲ್ಲಿ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಬಳಕೆದಾರರ ಪ್ರಮಾಣ ಶೇ.94ರಷ್ಟಿದೆ. ಐಫೋನ್ ಬಳಕೆದಾರರ ಪ್ರಮಾಣವು ಶೇ.5ರಷ್ಟಿದ್ದರೂ, ಕೋಟ್ಯಂತರ ಜನ ಬಳಸುತ್ತಿದ್ದಾರೆ. ಹಾಗಾಗಿ, ಕೇಂದ್ರ ಸರ್ಕಾರವು ಹೊಸ ಅಪ್ಡೇಟ್ ನೀಡಿದೆ. ಹಾಗೆ ನೋಡಿದರೆ, ಪರ್ಸನಲ್ ಡೇಟಾ ಸುರಕ್ಷತೆಗಾಗಿ ಜಗತ್ತಿನಲ್ಲೇ ಆ್ಯಪಲ್ ಹೆಚ್ಚು ವಿಶ್ವಾಸ ಗಳಿಸಿದೆ. ಈಗ ಈ ಕಂಪನಿಯ ಡಿವೈಸ್ ಗಳಿಗೂ ಹ್ಯಾಕರ್ ಗಳ ದಾಳಿ ಭೀತಿ ಕಾಡುವಂತಾಗಿದೆ.



















