ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಕದನ ವಿರಾಮ ಘೋಷಣೆಯಾಗಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಈ ಕುರಿತು ಘೋಷಣೆ ಮಾಡಿದ್ದಾರೆ. ಜೈಶಂಕರ್ ಕೂಡ ಈ ಕುರಿತು ಘೋಷಿಸಿದ್ದಾರೆ. ಆದರೆ ಈಗಾಗಲೇ ಸಿಂಧೂ ನದಿ ಪಾಕ್ಗೆ ಹೋಗದಂತೆ (Indus water) ಬಂದ್ ಮಾಡಲಾಗಿದೆ. ಅದನ್ನು ಯಾವುದೇ ಕಾರಣಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ದನ ವಿರಾಮಕ್ಕೆ ಪೂರ್ವ ಅಥವಾ ನಂತರದ ಯಾವುದೇ ಷರತ್ತುಗಳಿಲ್ಲ. ಪಾಕಿಸ್ತಾನದಿಂದ ಈ ಕರೆ ಬಂದಿದೆ. ಸಿಂಧೂ ಜಲ ಒಪ್ಪಂದವು ಅಮಾನತಿನಲ್ಲಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ಹೇಳಿವೆ.
ಭಾರತ ಯಾವುದೇ ಮಿಲಿಟರಿ ದಾಳಿಗಳನ್ನು ನಡೆಸುವುದಿಲ್ಲ. ಆದರೆ ಪಂಚ ನಿರ್ಧಾರಗಳನ್ನು ಕಾಯ್ದುಕೊಂಡಿದೆ ಎಂದು ಹೇಳಿದ್ದಾರೆ. 5 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿನ ಎಲ್ಲ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡೂ ಕಡೆಯವರು ನಿಲ್ಲಿಸುವುದಾಗಿ ಮಿಶ್ರಿ ಖಚಿತಪಡಿಸಿದ್ದಾರೆ.



















