ಕೊಪ್ಪಳ: ನರಮೇಧದ ನಂತರ ನಮ್ಮ ಸೇನೆ ಪ್ರತಿಕಾರವನ್ನು ತೆಗೆದುಕೊಂಡಿದೆ. ನಮ್ಮ ಸೈನಿಕರಿಗೆ ಒಂದು ಸಲಾಂ ಎಂದು ಕೊಪ್ಪಳದ ದಿಡ್ಡಿಕೇರಿಯ ಜುಮ್ಮಾ ಮಸೀದಿಯ ಮೌಲ್ವಿ ಮೌಲಾನ ಹಫೀಜ್ ಮೋಯಿದ್ದಿನ್ ಖಾದ್ರಿ ಹೇಳಿದ್ದಾರೆ.

ನಗರದಲ್ಲಿನ ಮಸೀದಿಯಲ್ಲಿ ಭಾರತೀಯ ಸೈನಿಕರ ಪರವಾಗಿ ಪ್ರಾರ್ಥಿಸಿದ ನಂತರ ಮಾತನಾಡಿದ ಅವರು, ಮಹಿಳೆಯರ ಸಿಂಧೂರ ಅಳಸಿದವರಿಗೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಬಿಸಿ ಮುಟ್ಟಿಸಿದ್ದಾರೆ. ಉಗ್ರರು ಪೈಶಾಚಿಕ ಕೃತ್ಯವನ್ನು ಇಡೀ ಜಗತ್ತು ವಿರೋಧಿಸಿದೆ. ಅವರ ಕೃತ್ಯಕ್ಕೆ ನಮ್ಮ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಅವರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ. ನಾವೆಲ್ಲರೂ ನಮ್ಮ ಸೈನಿಕರೊಂದಿಗೆ ಇದ್ದೇವೆ. ಅಲ್ಲಾಹ್ ನಮ್ಮ ಸೈನಿಕರಿಗೆ ಶಕ್ತಿ ಕೊಡಲಿ ಎಂದು ತಿಳಿಸಿದ್ದಾರೆ.



















