ಕುತಂತ್ರಿ ಪಾಕಿಸ್ತಾನ ಮತ್ತೆ ತನ್ನ ಕುತಂತ್ರ ಬುದ್ಧಿ ಮುಂದುವರೆಸಿದೆ. ಜಮ್ಮು ವಿಮಾನ ನಿಲ್ದಾಣದ ಪಾಕಿಸ್ತಾನದ ಡ್ರೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಹಿನ್ನೆಲೆಯಲ್ಲಿ ಉದಂಫುರದಲ್ಲಿ ಜೋರಾದ ಸ್ಫೋಟ ಕೇಳಿ ಬಂದಿದೆ.
ಪಾಕಿಸ್ತಾನದ ಒಳಗೆ ನುಗ್ಗಿದ್ದ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿಗಳನ್ನು ಧ್ವಂಸ ಮಾಡಿತ್ತು. ಹೀಗಾಗಿ ಪಾಕ್ ನಾಯಿ ಬುದ್ಧಿ ತೋರಿಸಲು ಯತ್ನಿಸುತ್ತಿದೆ. ಇದರಿಂದಾಗಿ ಜಮ್ಮುವಿನಲ್ಲಿ ವಿದ್ಯುತ್ ಕೈ ಕೊಟ್ಟಿದೆ. ಭಾರೀ ಶಬ್ದ ಕೇಳಿದ ನಂತರ ಸೈರನ್ ಕೂಗಿಕೊಳ್ಳಲಾರಂಭಿಸಿದೆ.
ಜಮ್ಮು ನಗರದಲ್ಲಿ ಜೋರಾಗಿ ಸ್ಫೋಟಗಳ ಸದ್ದು ಕೇಳಿಬಂದ ನಂತರ ಗುರುವಾರ ಜಮ್ಮುವಿನಲ್ಲಿ ಸಂಪೂರ್ಣ ಬ್ಲಾಕೌಟ್ ಕಂಡು ಬಂದಿದೆ. ಪಾಕಿಸ್ತಾನ ಜಮ್ಮು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಜಮ್ಮು ವಿಭಾಗದ ಕಿಶ್ತ್ವಾರ್‌ನಲ್ಲಿಯೂ ಸಂಪೂರ್ಣ ಬ್ಲಾಕೌಟ್ ಕಂಡುಬಂದಿದೆ. ಜಿಲ್ಲೆಯಾದ್ಯಂತ ಸೈರನ್‌ಗಳು ಕೇಳಿ ಬಂದಿವೆ. ಭಾರತವು ಪಾಕ್ ಗೆ ದೊಡ್ ಪೆಟ್ಟು ನೀಡಿದ ನಂತರ ಪಾಕ್ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ.



















