ಜಿಯೋಹಾಟ್ ಸ್ಟಾರ್ ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಹೊರಬಿದ್ದಿದೆ. ಸದ್ಯ ಐಪಿಎಲ್ ಗುಂಗಿನಲ್ಲಿ ತೇಲುತ್ತಿರೋ ಅಭಿಮಾನಿಗಳಿಗೆ ಶೀಘ್ರವೇ ಭರ್ಜರಿ ಓರಿಜಿನಲ್ ಕಂಟೆಂಟ್ ನೋಡುವ ಭಾಗ್ಯ ಸಿಗಲಿದೆ.
ಹೌದು, ಜಿಯೋಹಾಟ್ ಸ್ಟಾರ್ ಮುಂದಿನ ಮೂರು ವರ್ಷದಲ್ಲಿ 30 ಸಾವಿರ ಕೋಟಿ ಬಂಡವಾಳ ಹೂಡಲು ನಿರ್ಧರಿಸಿದೆ. ಮುಂಬೈನಲ್ಲಿ ನಡೆದಿರುವ ವೇವ್ಸ್ ಸಮಿಟ್ ನಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಉದಯ್ ಶಂಕರ್, ಜಿಯೋಹಾಟ್ ಸ್ಟಾರ್, ಭಾರತದ ಮನೋರಂಜನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಲಿದೆ ಎಂದಿದ್ದಾರೆ. ಈ ಮೂಲಕ ಜಿಯೋಸ್ಟಾರ್ ಮುಂದಿನ ದಿನಗಳಲ್ಲಿ ಬಿಗ್ ಬಜೆಟ್ ನ ಸಿನಿಮಾಗಳು, ವೆಬ್ ಸರಣಿಗಳಲ್ಲಿ ಬಂಡವಾಳ ಹೂಡುವ ಸುಳಿವು ನೀಡಿದ್ದಾರೆ.
ಈ ಮೂಲಕ ತಮ್ಮ ಎದುರಾಳಿಗಳಾದ ಅಮೆಜಾನ್ ಪ್ರೈಮ್ ಮತ್ತು ನೆಟ್ ಫ್ಲಿಕ್ಸ್ ಗೆ ನಡುಕ ಹುಟ್ಟಿಸಿದ್ದಾರೆ. ಜಿಯೋ ಸ್ಟಾರ್ ನಿಂದಾಗಿ ಭಾರತೀಯರಿಗೆ ಹೊಸ ಬಗೆಯ ಮನೋರಂಜನೆಯನ್ನು ಒದಗಿಸಲಾಗ್ತಿದೆ. ಜಿಯೋ ಮೂಲಕ 4ಜಿ ಮೊಬೈಲ್ ಸೇವೆ ಅಗ್ಗದ ಬೆಲೆಗೆ ಲಭ್ಯವಿದ್ದು, ಭವಿಷ್ಯದಲ್ಲಿ ವೀಕ್ಷಕರ ಸಂಖ್ಯೆ ದ್ವಿಗುಣಗೊಳ್ಳಲಿದೆ. ಇದು ನಿಜಕ್ಕೂ ಮನೋರಂಜನಾ ಪ್ರಪಂಚವನ್ನು ಬೇರೆಯದ್ದೇ ಎತ್ತರಕ್ಕೆ ಕೊಂಡೊಯ್ಯಲಿದೆ ಅಂತಾ ಉದಯ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.