ಪಾಕ್ ವಿರುದ್ಧ ಪರೋಕ್ಷ ಯುದ್ಧ ಸಾರಿರುವ ಭಾರತ ಇದೀಗ ಮತ್ತೊಂದು ಶಾಕ್ ನೀಡಿದೆ.

ಸಿಂಧು ನದಿ ಉಪನದಿಯಾದ ಚಿನಾಬ್ ನ ಬಗ್ಲಿಹಾರ್ ಅಣೆಕಟ್ಟಿನಿಂದ ನೀರಿನ ಹರಿವನ್ನು ನಿಲ್ಲಿಸಲಾಗಿದೆ. ಈ ಮೂಲಕ ಪಾಕಿಸ್ತಾನ ಹನಿ ನೀರಿಗೂ ಹಾಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾದಂತಾಗಿದೆ.

ಇದೇ ವೇಳೆ, ಇನ್ನೊಂದು ಉಪನದಿಯಾದ ಝೀಲಂಗೆ ಅಡ್ಡಲಾಗಿ ನಿರ್ಮಿಸಿರುವ ಕಿಶನ್ ಗಂಗಾ ಅಣೆಕಟ್ಟಿನಿಂದಲೂ ನೀರಿನ ಹರಿವನ್ನು ನಿಲ್ಲಿಸಲು ಚಿಂತನೆ ನಡೆಸಿದೆ. ಕಳೆದ ವಾರವಷ್ಟೇ ಸಿಂಧು ನದಿ ಒಪ್ಪಂದವನ್ನು ಭಾರತ ಕಡೆದು ಹಾಕಿತ್ತು. ಈ ಮೂಲಕ ಪಾಕಿಸ್ತಾನದ ಶೇಕಡಾ 80ರಷ್ಟು ಕೃಷಿ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಕೊಕ್ಕೆ ಹಾಕಿದೆ. ಇದೀಗ ಬಗ್ಲಿಹಾರ್ ಡ್ಯಾಂನಿಂದ ನೀರನ್ನು ನಿಲ್ಲಿಸುವ ಮೂಲಕ ಮತ್ತೊಂದು ಚೆಕ್ ಮೇಟ್ ಇಡಲಾಗಿದೆ.