ಬೆಂಗಳೂರು: ವಾಹನ ಚಾಲನಾ ಪರವಾನಗಿ (Driving Licence) ಅವಧಿ ಮುಗಿದಿದ್ದರೆ, ಅದನ್ನು ಕಡ್ಡಾಯವಾಗಿ ನವೀಕರಣ ಮಾಡಿಕೊಳ್ಳಬೇಕು. ಈಗಂತೂ ಆನ್ ಲೈನ್ ಮೂಲಕವೇ ಡಿಎಲ್ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಡ್ರೈವಿಂಗ್ ಲೈಸೆನ್ಸ್ ಅವಧಿ ಮುಗಿದವರು ಕೂಡಲೇ ಆನ್ ಲೈನ್ ಮೂಲಕ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಮುಂದಿನ ಸ್ಟೆಪ್ ಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ನವೀಕರಿಸಲು ಈ ಹಂತಗಳನ್ನು ಪಾಲಿಸಿ
- ಮೊದಲು ಸಾರಿಗೆ ಇಲಾಖೆಯ ವೆಬ್ ಸೈಟ್ ಓಪನ್ ಮಾಡಿ (https://parivahan.gov.in/parivahan/)
- Apply Online ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಇದಾದ ನಂತರ ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದ ಸೇವೆಗಳ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ಕಾಣುವ ಪಟ್ಟಿಯಿಂದ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ
- ನಂತರ Select Services in Driving License ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದ ವಿವಿಧ ಸೇವೆಗಳೊಂದಿಗೆ ಹೊಸ ಪೇಜ್ ಓಪನ್ ಆಗುತ್ತದೆ
- ಅರ್ಜಿಯನ್ನು ಭರ್ತಿ ಮಾಡಿ. ಜನ್ಮ ದಿನಾಂಕ, ಡ್ರೈವಿಂಗ್ ಲೈಸೆನ್ಸ್ ನಂಬರ್ ಮತ್ತು ಇತರೆ ಅಗತ್ಯ ವಿವರಗಳನ್ನು ನಮೂದಿಸಿ
- ಬಳಿಕ Restore ಆಯ್ಕೆಯನ್ನು ಆರಿಸಿ. ಲಭ್ಯವಿರುವ ಸೇವೆಗಳ ಪಟ್ಟಿಯಿಂದ ನವೀಕರಣ ಆಯ್ಕೆ ಇರುತ್ತದೆ.
- ಅಗತ್ಯವಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಿ (ಇತ್ತೀಚಿನ ಫೋಟೋ ಮತ್ತು ಸಹಿ)
- ಇದಾದ ಬಳಿಕ ಆನ್ ಲೈನ್ ನಲ್ಲಿ ಶುಲ್ಕ ಪಾವತಿ ಮಾಡಿದ ಬಳಿಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ
ಯಾವ ದಾಖಲೆ ಬೇಕು?
ವಾಹನ ಚಾಲನಾ ಪರವಾನಗಿ ನವೀಕರಣ ಮಾಡಲು ಕೆಲ ದಾಖಲೆಗಳನ್ನು ನೀಡಬೇಕಾಗುತ್ತದೆ. ಅವಧಿ ಮುಗಿದಿರುವ ಡ್ರೈವಿಂಗ್ ಲೈಸೆನ್ಸ್, ಪಾಸ್ ಪೋರ್ಟ್ ಸೈಜಿನ ಫೋಟೋ, ಫೋಟೋ ಮೇಲೆ ನಿಮ್ಮ ಸಹಿ, ಯಾವುದಾದರೂ ಗುರುತಿನ ಚೀಟಿ ಅಥವಾ ವಿಳಾಸದ ದಾಖಲೆಯನ್ನು ನೀಡಬೇಕು.
ಶುಲ್ಕ ಎಷ್ಟು?
ಆನ್ ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕೆ ಅರ್ಜಿ ಸಲ್ಲಿಸಲು ಶುಲ್ಕ ಇರುತ್ತದೆ. ನಿಯಮಗಳ ಪ್ರಕಾರ, ಡಿಎಲ್ ಅವಧಿ ಮುಗಿದ 30 ದಿನಗಳೊಳಗೆ ನವೀಕರಣಕ್ಕೆ ಅರ್ಜಿ ಸಲ್ಲಿಸಬೇಕು. 30 ದಿನಗಳ ಒಳಗೆ ಅರ್ಜಿ ಸಲ್ಲಿಸಿದರೆ 400 ರೂ. ಶುಲ್ಕ ಇರುತ್ತದೆ. 30 ದಿನಗಳ ನಂತರ ಸಲ್ಲಿಸಿದರೆ 1,500 ರೂ. ಕಟ್ಟಬೇಕಾಗುತ್ತದೆ.



















