ಬೆಂಗಳೂರು: ಯಾವಾಗ ರಾಜೀನಾಮೆ ಸಲ್ಲಿಸುತ್ತೀರಿ ಯತ್ನಾಳ್ ಅವರೇ ಎಂದು ಫೇಸ್ ಬುಕ್ ಮೂಲಕ ಸಚಿವ ಶಿವಾನಂದ್ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹಾಕಿದ ಸವಾಲು ಸ್ವೀಕರಿಸಿದ್ದೇನೆ. ಅದರಂತೆ ವಿಧಾನ ಸಭೆಯ ಸಭಾಧ್ಯಕ್ಷರಿಗೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಇದೊಂದು ಸತ್ವ ಪರೀಕ್ಷೆ ಆಗಿಯೇ ಬಿಡಲಿ! ಇದು ಕೇವಲ ನನ್ನ ಅಸ್ತಿತ್ವದ ಪ್ರಶ್ನೆಯಲ್ಲ. ನಮ್ಮ ಬಸವನ ಬಾಗೇವಾಡಿ ಮತಕ್ಷೇತ್ರದ ಮಹಾ ಜನತೆಯ ಸ್ವಾಭಿಮಾನದ ಪ್ರಶ್ನೆ. ನಾನು ಇವತ್ತು ಈ ನಿರ್ಧಾರ ಮಾಡಿರದಿದ್ದರೆ, ಅದು ನನ್ನ ಮತದಾರರಿಗೆ ಮಾಡುವ ಅವಮಾನವಾಗುತ್ತಿತ್ತು!
ಹೀಗಾಗಿ ಯತ್ನಾಳ್ ಅವರು ಹಾಕಿದ ಸವಾಲು ಸ್ವೀಕರಿಸಿ, ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನೀವು ಯಾವಾಗ ರಾಜೀನಾಮೆ ಸಲ್ಲಿಸುತ್ತೀರಿ ಬಸನಗೌಡ ಪಾಟೀಲ್ ಯತ್ನಾಳ್ ಅವರೇ? ಎಂದು ಯತ್ನಾಳ್ ಪೋಸ್ಟ್ ಟ್ಯಾಗ್ ಮಾಡಿ ಶಿವಾನಂದ್ ಪಾಟೀಲ್ ಕೌಂಟರ್ ಕೊಟ್ಟಿದ್ದಾರೆ.



















