ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಮತ್ತೊಮ್ಮೆ ಪ್ರಥಮ ಸ್ಥಾನದಲ್ಲಿ ಮಿಂಚಿದೆ.
ಶೇ. 91.12 ಪ್ರತಿಶತ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ಮೊದಲ ಸ್ಥಾನದಲ್ಲಿ ರಾರಾಜಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಶೇಕಡಾ 89.96 ಫಲಿತಾಂಶದೊಂದಿಗೆ ಉಡುಪಿಯಿದ್ದರೆ, ಶೇ. 83.19ರಷ್ಟುರ ಫಲಿತಾಂಶದೊಟ್ಟಿಗೆ ಉತ್ತರ ಕನ್ನಡ ಮೂರನೇ ಸ್ಥಾನದಲ್ಲಿದೆ.

ನಾಲ್ಕನೇ ಸ್ಥಾನದಲ್ಲಿ ಶಿವಮೊಗ್ಗ, ಐದನೇ ಕ್ರಮಾಂಕದಲ್ಲಿ ಕೊಡಗು ಸ್ಥಾನ ಪಡೆದಿದೆ. ಹಾಸನ ಆರು, ಸಿರಸಿ 7 ಹಾಗೂ 8ನೇ ಸ್ಥಾನದಲ್ಲಿ ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ಒಂಭತ್ತು ಬೆಂಗಳೂರು ಉತ್ತರ ಹತ್ತನೇ ಸ್ಥಾನದಲ್ಲಿದೆ. ಇನ್ನು ಶೇ. 66.14 ಪ್ರತಿಶತ ಫಲಿತಾಂಶದೊಂದಿಗೆ ಕಲಬುರಗಿ ಅಂತಿಮ ಸ್ಥಾನಕ್ಕೆ ನೂಕಲ್ಪಟ್ಟಿದೆ.



















