ನವದೆಹಲಿ: 26 ನಾಗರಿಕರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ನಂತರ ಭಾರತ ಪ್ರತೀಕಾರಕ್ಕಾಗಿ ಕಾಯುತ್ತಿದೆ. ಹೀಗಾಗಿ ಯಾವ ಸಂದರ್ಭದಲ್ಲಿ ಭಾರತ ಮುಗಿ ಬೀಳುವುದೋ ಎಂಬ ಆತಂಕದಲ್ಲಿರುವ ಪಾಕಿಸ್ತಾನ್ ಇನ್ನಿಲ್ಲದ ನಾಟಕ ಆರಂಭಿಸಿದೆ.
ಈಗ ಪಾಪರ್ ಪಾಕ್ ಗಡಿಯಲ್ಲಿ ತಾಲೀಮು ನಡೆಸಿದೆ. ಇದಕ್ಕಾಗಿ ಚೀನಾದ ಹೊವಿಟ್ಜರ್‌ಗಳನ್ನು ತನ್ನ ಸೇನೆಗೆ ಸೇರಿಸಿಕೊಂಡಿದೆ. ಭಾರತದ ಗಡಿಯ ಬಳಿ ಪೂರ್ಣ ಯುದ್ಧ ನೌಕಾಪಡೆಯೊಂದಿಗೆ ಪಾಕಿಸ್ತಾನ ಕವಾಯತುಗಳನ್ನು ನಡೆಸುತ್ತಿದೆ. ಪಾಕಿಸ್ತಾನಿ ಸೇನೆಯು ಭಾರತದ ಗಡಿಯಲ್ಲಿ ತನ್ನ ನಿಯೋಜನೆಯನ್ನು ತೀವ್ರಗೊಳಿಸಿದೆ. ಸುಧಾರಿತ ಶಸ್ತ್ರಾಸ್ತ್ರಗಳನ್ನು ಇರಿಸಿ, ಬಲ ಪ್ರದರ್ಶನ ನಡೆಸುತ್ತಿದೆ.
ಭಾರತದೊಂದಿಗೆ ಸಂಘರ್ಷ ಹೆಚ್ಚುತ್ತಿರುವ ನಡುವೆಯೂ ಪಾಕಿಸ್ತಾನವು ಸಿಯಾಲ್‌ಕೋಟ್, ನರೋವಾಲ್, ಜಫರ್ವಾಲ್ ಮತ್ತು ಶಕರ್‌ಗಢದಲ್ಲಿ ದೊಡ್ಡ ಪ್ರಮಾಣದ ಭೂಸೇನಾ ಕವಾಯತುಗಳನ್ನು ನಡೆಸುತ್ತಿದೆ. ದೊಡ್ಡ-ಕ್ಯಾಲಿಬರ್ ಶಸ್ತ್ರಾಸ್ತ್ರಗಳು ಸೇರಿದಂತೆ ಟ್ಯಾಂಕ್‌ಗಳು, ಫಿರಂಗಿ ಮತ್ತು ಕಾಲಾಳುಪಡೆಗಳನ್ನು ಈ ಪ್ರಾಕ್ಟೀಸ್ ಒಳಗೊಂಡಿವೆ.



















