ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಜೆರುಸಲೇಂನಲ್ಲಿ ಹಿಂದೆಂದೂ ಕಂಡಿರದ ಭೀಕರ ಕಾಡ್ಗಿಚ್ಚು: ಇಸ್ರೇಲ್‌ನಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ

May 1, 2025
Share on WhatsappShare on FacebookShare on Twitter

ಜೆರುಸಲೇಂ: ಇಸ್ರೇಲ್ ರಾಜಧಾನಿ ಜೆರುಸಲೇಂನ ಹೊರವಲಯದಲ್ಲಿ ಭಾರೀ ಕಾಡ್ಗಿಚ್ಚು ವ್ಯಾಪಿಸಿದ್ದು(Wildfire in Israel), ಇಸ್ರೇಲ್ ನಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಿದೆ. ಕಾಡ್ಗಿಚ್ಚಿನ ಪರಿಣಾಮವಾಗಿ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತಿದ್ದು, ರಾಜಧಾನಿಯ ಮೇಲೆ ದಟ್ಟವಾದ ಹೊಗೆ ಆವರಿಸಿದೆ.

ಇದನ್ನು ಇಸ್ರೇಲ್ ಇತಿಹಾಸದಲ್ಲೇ ಅತಿ ಭೀಕರ ಕಾಡ್ಗಿಚ್ಚು ಎಂದು ಬಣ್ಣಿಸಲಾಗಿದೆ. ಬುಧವಾರ ಇಸ್ರೇಲ್ ಹುತಾತ್ಮ ಸೈನಿಕರ ಸ್ಮರಣ ದಿನವನ್ನು ಆಚರಿಸುತ್ತಿರುವ ಹೊತ್ತಲ್ಲೇ ಕಾಡ್ಗಿಚ್ಚು ಏಕಾಏಕಿ ಕಾಣಿಸಿಕೊಂಡಿದ್ದು, ಒಣ ಹವೆ ಮತ್ತು ಭಾರೀ ಗಾಳಿಯಿಂದಾಗಿ ಬೆಂಕಿಯು ವೇಗವಾಗಿ ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೇಗವಾಗಿ ವ್ಯಾಪಿಸುತ್ತಿರುವ ಜ್ವಾಲೆಯು ಜೆರುಸಲೇಂ ಅನ್ನು ಆವರಿಸುವ ಭೀತಿಯಿದ್ದು, ಎಲ್ಲರೂ ಎಚ್ಚರಿಕೆಯಿಂದಿರುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೂಚಿಸಿದ್ದಾರೆ. ಇದು “ಸ್ಥಳೀಯ ಮಟ್ಟಿಗೆ ವ್ಯಾಪಿಸಿರುವಂಥದ್ದಲ್ಲ. ಹೀಗಾಗಿ ಇದು ರಾಷ್ಟ್ರೀಯ ತುರ್ತು ಪರಿಸ್ಥಿತಿ” ಎಂದು ಅವರು ಬಣ್ಣಿಸಿದ್ದಾರೆ. ಹೆಚ್ಚಿನ ಅಗ್ನಿಶಾಮಕ ಎಂಜಿನ್ ಗಳು ಮತ್ತು ಫೈರ್ ಬ್ರೇಕ್ಸ್‌ಗಳ ಅಗತ್ಯವನ್ನು ಒತ್ತಿಹೇಳಿದ ಅವರು, “ಜೆರುಸಲೇಂ ಅನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ” ಎಂದು ಹೇಳಿದ್ದಾರೆ.

ಹೆದ್ದಾರಿಯುದ್ದಕ್ಕೂ ಭಾರೀ ಪ್ರಮಾಣದ ಹೊಗೆ ಆವರಿಸಿರುವುದು ಕಂಡುಬಂದಿದೆ. ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಹರಸಾಹಸ ಪಡುತ್ತಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸಲು ಸೇನೆಯನ್ನು ನಿಯೋಜಿಸಲಾಗಿದೆ.

ಸುಟ್ಟಗಾಯಗಳು ಮತ್ತು ಹೊಗೆಯನ್ನು ಸೇವಿಸಿ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ 23 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಇಸ್ರೇಲ್ ತುರ್ತು ವೈದ್ಯಕೀಯ ಸೇವೆ ಮ್ಯಾಗೆನ್ ಡೇವಿಡ್ ಅಡೋಮ್ (ಎಂಡಿಎ) ತಿಳಿಸಿದೆ. ಹಲವು ವರ್ಷಗಳಲ್ಲೇ ಮೊದಲ ಬಾರಿಗೆ ಸಂಭವಿಸಿದ ಈ ಭೀಕರ ಕಾಡ್ಗಿಚ್ಚಿನಿಂದ ನೂರಾರು ನಾಗರಿಕರು ಅಪಾಯದಲ್ಲಿದ್ದಾರೆ ಎಂದೂ ಸಂಸ್ಥೆ ಎಚ್ಚರಿಸಿದೆ.

ಬೆಂಕಿಯ ವ್ಯಾಪಿಸುವಿಕೆಯಿಂದಾಗಿ ಟೆಲ್ ಅವೀವ್‌ನಿಂದ ಜೆರುಸಲೇಂಗೆ ಸಂಪರ್ಕ ಕಲ್ಪಿಸುವ ಪ್ರಧಾನ ಹೆದ್ದಾರಿಯಾದ ರೂಟ್ 1 ಅನ್ನು ಮುಚ್ಚಲಾಗಿದೆ. ನಿವಾಸಿಗಳು ತಮ್ಮ ವಾಹನಗಳನ್ನು ಬಿಟ್ಟು ಕಾಲ್ನಡಿಗೆಯಲ್ಲೇ ಓಡಿಹೋಗಲಾರಂಭಿಸಿದ್ದಾರೆ. ರಸ್ತೆಯುದ್ದಕ್ಕೂ ಗಗನದಲ್ಲಿ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಾರದ ಹಿಂದಷ್ಟೇ ಬೆಂಕಿಯಿಂದ ಹಾನಿಗೊಳಗಾದ ಪ್ರದೇಶಗಳು ಸೇರಿದಂತೆ ಹೆದ್ದಾರಿ ಕಾರಿಡಾರ್ ಉದ್ದಕ್ಕೂ ಪೊಲೀಸರು ಹಲವು ಗ್ರಾಮಸ್ಥರನ್ನು ಸ್ಥಳಾಂತರಿಸಿದ್ದಾರೆ. ಯಾರೋ ಬೆಂಕಿ ಹಚ್ಚಿದ್ದೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆನ್ ಗ್ವಿರ್ ಅವರು ಅಂದಾಜಿಸಿದ್ದಾರೆ. ಅದರಂತೆ, ನಗರದ ದಕ್ಷಿಣ ಪ್ರದೇಶದಲ್ಲಿ ಹೊಲಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಆರೋಪದ ಮೇಲೆ ಪೂರ್ವ ಜೆರುಸಲೇಂ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಗ್ನಿಶಾಮಕ ಮುಖ್ಯಸ್ಥ ಇಯಾಲ್ ಕ್ಯಾಸ್ಪಿಯನ್ ಮಾತನಾಡಿ, ಪರಿಸ್ಥಿತಿ ಭೀಕರವಾಗಿದೆ: ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ನಮ್ಮ ವಿಮಾನಗಳಿಗೂ ಈಗ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ … ಜೀವಗಳನ್ನು ಉಳಿಸುವುದು ನಮ್ಮ ಗುರಿಯಾಗಿದೆ. ಇಸ್ರೇಲ್ ಒಂದು ದಶಕದಲ್ಲೇ ಅತಿದೊಡ್ಡ ಕಾಡ್ಗಿಚ್ಚು ದುರಂತವನ್ನು ಎದುರಿಸುತ್ತಿದೆ” ಎಂದಿದ್ದಾರೆ.

ಕಾಡ್ಗಿಚ್ಚು ಪೀಡಿತ ಪ್ರದೇಶಗಳಲ್ಲಿನ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅರಣ್ಯಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಬೆಂಕಿ ವ್ಯಾಪಿಸಿದಂತೆ ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ ಮತ್ತು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮೌಂಟ್ ಹರ್ಜಲ್‌ನಲ್ಲಿ ರಾಷ್ಟ್ರೀಯ ಸಮಾರಂಭ ಸೇರಿದಂತೆ ಗುರುವಾರ ಸ್ವಾತಂತ್ರ್ಯ ದಿನಾಚರಣೆಗೆ ಯೋಜಿಸಲಾಗಿದ್ದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಇದೇ ವೇಳೆ, ಇಸ್ರೇಲ್ ಸರ್ಕಾರವು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ. ಸ್ಥಳೀಯ ಸಿಬ್ಬಂದಿಗೆ ನೆರವಾಗಲು ಇಟಲಿ, ಕ್ರೊಯೇಷಿಯಾ ಮತ್ತು ಉತ್ತರ ಮ್ಯಾಸಿಡೋನಿಯಾದಿಂದ ಅಗ್ನಿಶಾಮಕ ವಿಮಾನಗಳನ್ನು ರವಾನಿಸಲಾಗಿದೆ. ಹೆಲಿಕಾಪ್ಟರ್ ಗಳ ಮೂಲಕ ಕಾಡ್ಗಿಚ್ಚಿನ ಮೇಲೆ ನೀರು ಸುರಿಯುವ ಕಾರ್ಯ ನಡೆಯುತ್ತಿವೆ.

2010ರಲ್ಲಿ ನಾಲ್ಕು ದಿನಗಳ ಕಾಲ ನಡೆದ ಮೌಂಟ್ ಕಾರ್ಮೆಲ್ ಕಾಡ್ಗಿಚ್ಚಿನಲ್ಲಿ 44 ಮಂದಿ ಮೃತಪಟ್ಟು, ಉತ್ತರ ಇಸ್ರೇಲ್ ನಲ್ಲಿ 12,000 ಎಕರೆಗೂ ಹೆಚ್ಚು ಪ್ರದೇಶ ನಾಶವಾಗಿತ್ತು. ಆದರೆ ಈಗ ಹಬ್ಬಿರುವ ಬೆಂಕಿಯು ಪ್ರಮಾಣ ಮತ್ತು ಪರಿಣಾಮದಲ್ಲಿ 2010ರ ದುರಂತವನ್ನು ಮೀರಿಸಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Tags: fleeinternationalIsrael faces nationalraging wildfireWildfire in Israel
SendShareTweet
Previous Post

ಕುಂಭಮೇಳದಲ್ಲಿ ಕೋಕಾ-ಕೋಲಾ ಭರ್ಜರಿ ಮಾರಾಟ: ಎಷ್ಟು ಮಾರಾಟವಾಗಿತ್ತು ಗೊತ್ತಾ?

Next Post

ಪೌರ ಕಾರ್ಮಿಕರ ಮಕ್ಕಳು ಐಎಎಸ್, ಪೊಲೀಸ್ ಅಧಿಕಾರಿ, ಸಚಿವರಾಗಲಿ!

Related Posts

ಪಾಕ್‌ನಲ್ಲಿ ಭೀಕರ ಹಿಮಪಾತ : ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ನಾಪತ್ತೆ.. ಇಬ್ಬರು ಸಾವು!
ವಿದೇಶ

ಪಾಕ್‌ನಲ್ಲಿ ಭೀಕರ ಹಿಮಪಾತ : ಖ್ಯಾತ ಪರ್ವತಾರೋಹಿ ನಿರ್ಮಲ್ ಪುರ್ಜಾ ನಾಪತ್ತೆ.. ಇಬ್ಬರು ಸಾವು!

ಯುರೋಪ್‌ನಲ್ಲಿ ಉಷ್ಣ ಅಲೆಗೆ ಇಂಗಿದ ನದಿ ನೀರು : ಡ್ಯಾನ್ಯೂಬ್‌ನಲ್ಲಿ ಪ್ರತ್ಯಕ್ಷವಾದವು ನಾಜಿ ಕಾಲದ ಯುದ್ಧನೌಕೆಗಳು!
ವಿದೇಶ

ಯುರೋಪ್‌ನಲ್ಲಿ ಉಷ್ಣ ಅಲೆಗೆ ಇಂಗಿದ ನದಿ ನೀರು : ಡ್ಯಾನ್ಯೂಬ್‌ನಲ್ಲಿ ಪ್ರತ್ಯಕ್ಷವಾದವು ನಾಜಿ ಕಾಲದ ಯುದ್ಧನೌಕೆಗಳು!

ಸ್ಪೇನ್-ಮೊರಾಕೊ ಗಡಿಯಲ್ಲಿ ಉದ್ವಿಗ್ನತೆ : ಏಕಾಏಕಿ ನುಗ್ಗಿದ ಸಾವಿರಾರು ವಲಸಿಗರು.. 9 ಸಾವು!
ವಿದೇಶ

ಸ್ಪೇನ್-ಮೊರಾಕೊ ಗಡಿಯಲ್ಲಿ ಉದ್ವಿಗ್ನತೆ : ಏಕಾಏಕಿ ನುಗ್ಗಿದ ಸಾವಿರಾರು ವಲಸಿಗರು.. 9 ಸಾವು!

‘ಕೃತಕ ಸೂರ್ಯ’ ನಿರ್ಮಾಣದತ್ತ ಚೀನಾ ಹೆಜ್ಜೆ : ವಿಶ್ವದ ಅತಿ ದೊಡ್ಡ ಮ್ಯಾಗ್ನೆಟ್ ಸಿದ್ಧ.. 2030ಕ್ಕೆ ಹೊಸ ಕ್ರಾಂತಿ?
ವಿದೇಶ

‘ಕೃತಕ ಸೂರ್ಯ’ ನಿರ್ಮಾಣದತ್ತ ಚೀನಾ ಹೆಜ್ಜೆ : ವಿಶ್ವದ ಅತಿ ದೊಡ್ಡ ಮ್ಯಾಗ್ನೆಟ್ ಸಿದ್ಧ.. 2030ಕ್ಕೆ ಹೊಸ ಕ್ರಾಂತಿ?

ಸೌದಿಯ ಅರಾಮ್ಕೋ ಮೇಲೆ ಹೌತಿ ದಾಳಿ : ಜಾಗತಿಕ ಮಟ್ಟದಲ್ಲಿ ತೀವ್ರಗೊಂಡ ಯುದ್ಧದ ಭೀತಿ!
ವಿದೇಶ

ಸೌದಿಯ ಅರಾಮ್ಕೋ ಮೇಲೆ ಹೌತಿ ದಾಳಿ : ಜಾಗತಿಕ ಮಟ್ಟದಲ್ಲಿ ತೀವ್ರಗೊಂಡ ಯುದ್ಧದ ಭೀತಿ!

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ
ದೇಶ

ಚೀನಾ, ಇಸ್ರೇಲ್‌ಗೆ ಟ್ರಂಪ್ ಶೇ.12.5 ದಂಡದ ಬಿಸಿ : ಭಾರತಕ್ಕೆ ಶೇ.10ರಷ್ಟು ಸುಂಕ

Next Post
ಪೌರ ಕಾರ್ಮಿಕರ ಮಕ್ಕಳು ಐಎಎಸ್, ಪೊಲೀಸ್ ಅಧಿಕಾರಿ, ಸಚಿವರಾಗಲಿ!

ಪೌರ ಕಾರ್ಮಿಕರ ಮಕ್ಕಳು ಐಎಎಸ್, ಪೊಲೀಸ್ ಅಧಿಕಾರಿ, ಸಚಿವರಾಗಲಿ!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಚರಂಡಿ ದುರ್ವಾಸನೆಗೆ ತತ್ತರಿಸಿದ ಬಾಣಸವಾಡಿ ; 3 ಬಡಾವಣೆ ನಿವಾಸಿಗಳ ಸಂಕಷ್ಟಕ್ಕೆ ಪರಿಹಾರ ಯಾವಾಗ?

ಚರಂಡಿ ದುರ್ವಾಸನೆಗೆ ತತ್ತರಿಸಿದ ಬಾಣಸವಾಡಿ ; 3 ಬಡಾವಣೆ ನಿವಾಸಿಗಳ ಸಂಕಷ್ಟಕ್ಕೆ ಪರಿಹಾರ ಯಾವಾಗ?

ಮಳೆ ಅಬ್ಬರಕ್ಕೆ ತೀರ್ಥಹಳ್ಳಿಯಲ್ಲಿ ದುರಂತ – ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ದುರ್ಮರಣ!

ಮಳೆ ಅಬ್ಬರಕ್ಕೆ ತೀರ್ಥಹಳ್ಳಿಯಲ್ಲಿ ದುರಂತ – ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ದುರ್ಮರಣ!

7 ಸಾವಿರ ವಿದ್ಯಾರ್ಥಿಗಳಿಗೆ HIV ಸೋಂಕು ಎಂಬ ಸುದ್ದಿ ಸುಳ್ಳು : ಆರೋಗ್ಯ ಇಲಾಖೆ ಸ್ಪಷ್ಟನೆ!

7 ಸಾವಿರ ವಿದ್ಯಾರ್ಥಿಗಳಿಗೆ HIV ಸೋಂಕು ಎಂಬ ಸುದ್ದಿ ಸುಳ್ಳು : ಆರೋಗ್ಯ ಇಲಾಖೆ ಸ್ಪಷ್ಟನೆ!

‘ಆರ್ಟ್ ಆಫ್ ಲಿವಿಂಗ್’ ಭೂಕಬಳಿಕೆ ವಿರುದ್ಧ ಸಿಡಿದೆದ್ದ ಸಮತಾ ಸೈನಿಕ ದಳ – ಇಂದಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ!

‘ಆರ್ಟ್ ಆಫ್ ಲಿವಿಂಗ್’ ಭೂಕಬಳಿಕೆ ವಿರುದ್ಧ ಸಿಡಿದೆದ್ದ ಸಮತಾ ಸೈನಿಕ ದಳ – ಇಂದಿನಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಚರಂಡಿ ದುರ್ವಾಸನೆಗೆ ತತ್ತರಿಸಿದ ಬಾಣಸವಾಡಿ ; 3 ಬಡಾವಣೆ ನಿವಾಸಿಗಳ ಸಂಕಷ್ಟಕ್ಕೆ ಪರಿಹಾರ ಯಾವಾಗ?

ಚರಂಡಿ ದುರ್ವಾಸನೆಗೆ ತತ್ತರಿಸಿದ ಬಾಣಸವಾಡಿ ; 3 ಬಡಾವಣೆ ನಿವಾಸಿಗಳ ಸಂಕಷ್ಟಕ್ಕೆ ಪರಿಹಾರ ಯಾವಾಗ?

ಮಳೆ ಅಬ್ಬರಕ್ಕೆ ತೀರ್ಥಹಳ್ಳಿಯಲ್ಲಿ ದುರಂತ – ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ದುರ್ಮರಣ!

ಮಳೆ ಅಬ್ಬರಕ್ಕೆ ತೀರ್ಥಹಳ್ಳಿಯಲ್ಲಿ ದುರಂತ – ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ದುರ್ಮರಣ!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat