ದೇಶದಲ್ಲಿ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಸೌಲಭ್ಯ ಒದಗಿಸಲು ಸ್ಥಾಪಿಸಲಾಗಿರುವ ರಾಷ್ಟ್ರೀಯ ಹಣಕಾಸು ಮೂಲಸೌಕರ್ಯ ಹಾಗೂ ಅಭಿವೃದ್ಧಿ ಬ್ಯಾಂಕ್ ನಲ್ಲಿ (National Bank for Financing Infrastructure and Development- NaBFID) 66 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಆಫೀಸರ್ಸ್ ಹುದ್ದೆಗಳ ನೇಮಕಾತಿಗಾಗಿ (NaBFID Officers Recruitment 2025) ಅಧಿಸೂಚನೆ ಹೊರಡಿಸಲಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನವಾಗಿದೆ.
ಯಾವ ಹುದ್ದೆಗಳು ಎಷ್ಟು ಖಾಲಿ?
- ಲೆಂಡಿಂಗ್ ಆಪರೇಷನ್ಸ್ (ಲೆಂಡಿಂಗ್ ಆ್ಯಂಡ್ ಪ್ರಾಜೆಕ್ಟ್ ಫೈನಾನ್ಸ್)- 31
- ಮಾನವ ಸಂಪನ್ಮೂಲ- 02
- ಅಕೌಂಟ್ಸ್- 01
- ಹೂಡಿಕೆ ಮತ್ತು ಖಜಾನೆ- 01
- ಕಾನೂನು- 02
- ಐಟಿ ಮತ್ತು ಆಪರೇಷನ್ಸ್- 07
- ಆಡಳಿತ- 01
- ಕಾರ್ಪೊರೇಟ್ ಸ್ಟ್ರ್ಯಾಟಜಿ, ಪಾರ್ಟ್ ನರ್ ಶಿಪ್ ಆ್ಯಂಡ್ ಎಕೋಸಿಸ್ಟಮ್ ಮ್ಯಾನೇಜ್ ಮೆಂಟ್-07
- ಕಂಪ್ಲಾಯನ್ಸ್- 02
- ಇಂಟರ್ನಲ್ ಆಡಿಟ್- 01
ವಿದ್ಯಾರ್ಹತೆ ಏನು?
ಬಿಇ/ ಬಿ.ಟೆಕ್, ಎಂ.ಟೆಕ್/ ಎಂಸಿಎ, ಸ್ನಾತಕೋತ್ತರ ಪದವಿ/ ಡಿಪ್ಲೋಮಾ, ಎಂಬಿಎ, ಸಿಎಂಎ, ಸಿಎ ಪದವಿ ಪಡೆದವರಿಗೆ ಆಯಾ ಹುದ್ದೆಗಳ ಅನ್ವಯ ಉದ್ಯೋಗಗಳು ಸಿಗಲಿವೆ. ಜನರಲ್, ಒಬಿಸಿ, ಇಡಬ್ಲ್ಯೂಎಸ್ ಕೆಟಗರಿಯವರು ಅರ್ಜಿ ಸಲ್ಲಿಸಲು 800 ರೂಪಾಯಿ ಶುಲ್ಕವಿದೆ. ಎಸ್ಸಿ, ಎಸ್ಟಿ ವರ್ಗದವರಿಗೆ 100 ರೂಪಾಯಿ ಅರ್ಜಿ ಶುಲ್ಕವಿದೆ.
ಕನಿಷ್ಠ 21 ಹಾಗೂ ಗರಿಷ್ಠ 32 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 26ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಆನ್ ಲೈನ್ ಮೂಲಕವೇ ಬೆಂಗಳೂರು, ವಿಜಯವಾಡ, ತಿರುವನಂತಪುರಂ, ಕೋಲ್ಕೊತ್ತ ಸೇರಿ ದೇಶದ ಹಲವು ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. nabfid.orgಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.



















