ಇದು ನನ್ನ ದೇಶ, ಇದು ನಮ್ಮ ಕಾಶ್ಮೀರ. ಚಲೋ ಕಾಶ್ಮೀರ್. ಪಹಲ್ಗಾಮ್ ಉಗ್ರರ ದಾಳಿಗೆ ನಲುಗಿದ ಕಾಶ್ಮೀರಕ್ಕೀಗ ನಟ ಅತುಲ್ ಕುಲಕರ್ಣಿ ಭೇಟಿ ನೀಡಿದ್ದಾರೆ.
ಅಷ್ಟೇ ಅಲ್ಲಾ ಪಹಲ್ಗಾಮ್ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿ ಸಂಚರಿಸಿರುವ ಅತುಲ್, ಆತಂಕ ಬಿಡಿ ಕಾಶ್ಮೀರಕ್ಕೆ ಹೊರಡಿ ಅಂತಾ ಕರೆ ನೀಡಿದ್ದಾರೆ. ಈ ಮೂಲಕ ಬಾಯ್ಕಾಟ್ ಕಾಶ್ಮೀರ್ ಹೋರಾಟಗಾರರಿಗೆ ಅತುಲ್ ತಿರುಗೇಟು ನೀಡಿದ್ದಾರೆ. ಉಗ್ರವಾದದ ಭೀತಿಯಿಂದ ಕಾಶ್ಮೀರ ಯಾತ್ರಾರ್ಥಿಗಳ ಕೊರತೆ ಅನುಭವಿಸುತ್ತಿದೆ.
ಇಲ್ಲಿನ ಜನರು ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದಾರೆ. ಹೀಗಾಗಿ ಕಾಶ್ಮೀರ್ ಚಲೋ ಅಭಿಯಾನಕ್ಕೆ ಅತುಲ್ ಕರೆ ನೀಡಿದ್ದಾರೆ. ಅಷ್ಟೇ ಅಲ್ಲಾ ವಿಮಾನದ ಖಾಲಿ ಸೀಟ್ ಗಳು, ಬ್ಯಾಟ್ ಮಾರಾಟಗಾರನೊಟ್ಟಿಗೆ ಸಂವಾದ ಹೀಗೆ ಹಲವು ಫೋಟೋಗಳನ್ನು ಅತುಲ್ ಶೇರ್ ಮಾಡಿದ್ದಾರೆ.


















