ಪಾಕ್ ನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಿದ್ದಾರೆ.
ಒಂದು ಗಂಟೆಗಳ ಕಾಲ ನಿರಂತರವಾಗಿ ಪಹಲ್ಗಾಮ್ ನಲ್ಲಿ ದಾಳಿ ನಡೆಯುತ್ತೆ. ಆದರೆ, ಯಾವೊಬ್ಬ ರಕ್ಷಣಾ ಸಿಬ್ಬಂದಿಯೂ ಅಲ್ಲಿಗೆ ಧಾವಿಸಿಲ್ಲ. ಬದಲಿಗೆ ಎಲ್ಲವೂ ಮುಗಿದ ಹೋದ ಮೇಲೆ ಬಂದವರು ಪಾಕಿಸ್ತಾನವೇ ನೇರ ಹೊಣೆ ಅಂತಾ ದೂರುತ್ತಾರೆ. ಇದೆಲ್ಲಾ ಭಾರತದ್ದೇ ಸೃಷ್ಠಿ ಎಂದು ಹೇಳುವ ಮೂಲಕ ಆಫ್ರಿದಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಭಾರತದಲ್ಲಾದ ಘಟನೆ ಘನ ಘೋರ. ಹಾಗಂತಾ ಇದರಲ್ಲಿ ಪಾಕಿಸ್ತಾನವನ್ನು ಮತ್ತು ಇಲ್ಲಿನ ಜನರನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ.
ವಿನಾಕಾರಣ ಎಲ್ಲದಕ್ಕೂ ಕ್ರಿಕೆಟ್ ನ್ನು ಹೊಣೆಯಾಗಿಸುವುದು ಕೂಡ ತಪ್ಪು. ಕೇವಲ ಕ್ರಿಕೆಟ್ ನಿಲ್ಲಿಸಿದರೆ ಹೇಗೆ? ಭಾರತದ ಕಬಡ್ಡಿ ಟೀಂ ಪಾಕ್ ಗೆ ಬಂದು ಆಟ ಆಡುತ್ತೆ. ಹಾಗಿದ್ದರೆ ಕ್ರಿಕೆಟ್ ಗೆ ಅನ್ವಯಿಸುವ ನಿಯಮ ಕಬಡ್ಡಿಗೆ ಅನ್ವಯಿಸುವುದಿಲ್ಲವಾ? ನ್ಯಾಯ ಮಾಡುವುದಿದ್ದರೆ ಎಲ್ಲ ಆಟಗಳಿಗೂ ಅನ್ವಯವಾಗಲಿ ಎಂದಿದ್ದಾರೆ.


















