ಇನ್ನು ಮುಂದೆ ಟ್ರೆಡ್ ಲೈಸೆನ್ಸ್ ನ್ನು ಕ್ಷಣ ಮಾತ್ರದಲ್ಲಿ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿದ್ದು, ಅದಕ್ಕಾಗಿ ಹೊಸ ತಂತ್ರಜ್ಞಾನದ ಮೊರೆ ಹೋಗಿದೆ.
ಹಿಂದೆ ಉದ್ದಿಮೆಗಳು ಲೈಸೆನ್ಸ್ ಪರವಾನಿಗೆ ಪಡೆಯಲು ಆನ್ ಲೈನ್ ಅಪ್ಲೈ ಮಾಡಿ ತಿಂಗಳುಗಟ್ಟಲೆ ಕಾಯಬೇಕಿತ್ತು. ಮತ್ತೊಂದು ಕಡೆ ಲಂಚ ನೀಡಬೇಕೀತ್ತು. ಈಗ ಇವುಗಳಿಗೆಲ್ಲ ಬಿಬಿಎಂಪಿ ಆಯುಕ್ತರು ಬ್ರೇಕ್ ಹಾಕಿದ್ದಾರೆ. ಇನ್ನು ಮುಂದೆ ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಎಲ್ಲ ಉದ್ದಿಮೆದಾರರು ಲೈಸೆನ್ಸ್ ಗೆ ಅಪ್ಲೈ ಮಾಡಿದ ಎರಡು ನಿಮಿಷಗಳಲ್ಲೇ ಲೈಸೆನ್ಸ್ ಪಡೆಯಬಹುದು.
ಟ್ರೆಡ್ ಲೈಸೆನ್ಸ್ ಪಡೆಯುವುದಕ್ಕೆ ಏನು ಮಾಡಬೇಕು?
- ಉದ್ದಿಮೆ ಪರವಾನಗಿ ಪಡೆಯಲು ಬೇಕಾದ ದಾಖಲೆಗಳು..
- ಮಾಲೀಕರ ಒಪ್ಪಿಗೆ ಪತ್ರ ಅಥವಾ ಬಾಡಿಗೆ ಒಪ್ಪಂದ.
- ವಿದ್ಯುತ್ ಬಿಲ್ ಅಥವಾ ಖಾತೆದಾರರ ಹೆಸರು ನಮೂದಿಸಿದ ಬಿಬಿಎಂಪಿಯ ತೆರಿಗೆ ಪಾವತಿ ರಶೀದಿ.
- ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಅಥವಾ ಪಾಸ್ಪೋರ್ಟ್.
- ಕಟ್ಟಡದ ಸ್ವಾಧೀನಾನುಭವ ಪ್ರಮಾಣ ಪತ್ರ.
- ನೆರೆಹೊರೆಯ ನಿವಾಸಿಗಳ ಒಪ್ಪಿಗೆಯ ಪತ್ರ.
- ಅಗ್ನಿಶಾಮಕ ಇಲಾಖೆ ಅನುಮೋದನೆ ಪತ್ರ.
- ಕಟ್ಟಡದ ಛಾಯಾಚಿತ್ರ
ಇಷ್ಟು ದಾಖಲೆಗಳನ್ನು ಅನ್ ಲೈನ್ ನಲ್ಲಿ ಅಪ್ಲೋಡ್ ಮಾಡಿದರೆ ಸಾಕು, ನಿಮ್ಮ ಉದ್ದಿಮೆ ಪರವಾನಿಗೆ ಸಿಗುತ್ತದೆ. ಇದನ್ನೆಲ್ಲ ಪರಿಶೀಲನೆ ಮಾಡಿ ಅಧಿಕಾರಿಗಳು ಲೈಸೆನ್ಸ್ ನೀಡುತ್ತಾರೆ. ಒಂದು ವೇಳೆ ನೀವು ತಪ್ಪು ಮಾಹಿತಿ ನೀಡಿ ಲೈಸೆನ್ಸ್ ಪಡೆದಿದ್ದರೆ, ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ವಿಶೇಷ ಅಯುಕ್ತ ವಿಕಾಸ್ ಕಿಶೋರ್ ಹೇಳಿದ್ದಾರೆ.