26 ಪ್ರವಾಸಿಗರ ನೆತ್ತರು ಹೀರಿದ ಕಟುಕರಿಗೆ ಯಾರೊಬ್ಬರೂ ಊಹಿಸದಂತಾ ಪೆಟ್ಟು ನೀಡ್ತೀವಿ ಅಂತಾ ಮೋದಿ ಪ್ರತಿಜ್ಞೆ ಮಾಡಿಯಾಗಿದೆ. ಅಲ್ಲಿಗೆ ಜಿಹಾದಿಗಳಿಗೆ ಅನ್ನ ಹಾಕಿ ಸಲುಹುತ್ತಿರೋ ಪಾಕಿಸ್ಥಾನದ ಪಾಪದ ಕೊಡವಂತೂ ತುಂಬಿರೋದು ಸತ್ಯ. ಹಾಗಂತಾ ಭಾರತ ನಿಜಕ್ಕೂ ಯುದ್ಧವನ್ನೇ ಸಾರಿಬಿಡುತ್ತಾ. ಯುದ್ಧ ಅಂದ್ರೆ ಅದು ಯಾವ ಮಾದರಿಯಲ್ಲಿರುತ್ತೆ. ಪಾಕಿಸ್ಥಾನದೊಳಗೇ ನುಗ್ಗಿ ಹೊಡೆಯೋಕೆ ಆಗುತ್ತಾ…ಜಾಗತಿಕ ಕಾನೂನು ಏನ್ ಹೇಳುತ್ತೆ. ಯೆಸ್ ನಾವಿವತ್ತು ಭಾರತದ ಮುಂದಿರುವ ಆಯ್ಕೆಗಳನ್ನು ಒಂದೊಂದಾಗಿ ತೆರೆದಿಡ್ತಾ ಹೋಗ್ತೀವಿ.
ಉಗ್ರರ ಶಿಬಿರಗಳನ್ನು ಮಟ್ಯಾಶ್ ಮಾಡೋದು
ಸದ್ಯಕ್ಕೆ ಭಾರತದ ಸಮರವೇನಿದ್ರು ಉಗ್ರವಾದದ ವಿರುದ್ಧ..ಹಾಗಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿಡಾರ ಹೂಡಿರೋ ಉಗ್ರರ ಸಂಹಾರಕ್ಕೆ ಪ್ಲ್ಯಾನ್ ರೂಪಿಸೋದು. ಒಂದು ಲೆಕ್ಕದ ಪ್ರಕಾರ 100ಕ್ಕೂ ಹೆಚ್ಚು ಭಯೋತ್ಪಾದನ ಸಂಘಟನೆಗಳ ಕ್ಯಾಂಪ್ ಗಳು ಪಿಒಕೆಯಲ್ಲಿವೆ. ಅಷ್ಟೇ ಅಲ್ಲಾ 40ಕ್ಕೂ ಹೆಚ್ಚು ಲಾಂಚ್ ಪ್ಯಾಡ್ ಗಳಿಗೆ. ಇವುಗಳನ್ನು ಗುರಿಯಾಗಿಸಿ ದಾಳಿ ನಡೆಸಿ, ಜಿಹಾದಿಗಳ ಸಂಹಾರ ಮಾಡಬಹುದು.
ಒಬ್ಬೊಬ್ಬರನ್ನೇ ಟಾರ್ಗೆಟ್ ಮಾಡಿ ಹತ್ಯೆ ಮಾಡೋದು
ಜೈಷ್, ಲಷ್ಕರ್ ಸೇರಿ ಭಾರತದ ವಿರುದ್ಧ ಮಚ್ಚು ಮಸಿಯುತ್ತಿರುವ ಉಗ್ರ ಸಂಘಟನೆಗಳನ್ನ ಟಾರ್ಗೆಟ್ ಮಾಡೋದು. ಅವುಗಳ ಅಗ್ರ ನಾಯಕರನ್ನು ಹೆಕ್ಕಿ ತೆಗೆದು ಬೇಟೆಯಾಡೋದು. ಹಿಂದೆ ಇಸ್ರೇಲ್ ಈ ಮಾದರಿಯ ದಾಳಿ ಮಾಡಿಯೇ ಹಮಾಸ್ ನರರಾಕ್ಷಸರನ್ನು ನಾಮಾವಶೇಷ ಮಾಡಿತ್ತು. ಇದೇ ಮಾದರಿಯಲ್ಲಿ ಭಾರತವೂ ಟಾರ್ಗೆಟ್ ಕಿಲ್ಲಿಂಗ್ ರೂಪಿಸಬಹುದು.
ಸಂಘಟಿತ ಕ್ಷಿಪಣಿ ದಾಳಿ ನಡೆಸಿ ಉಗ್ರರ ಹುಟ್ಟಡಗಿಸೋದು
ಇನ್ನು ಪಿಒಕೆಯಲ್ಲಿ ಬಿಲ ತೋಡಿಕೊಂಡು ಅಡಗಿರೋ ಜಿಹಾದಿ ರಕ್ಕಸರ ಮೇಲೆ ಪ್ರಹಾರ ನಡೆಸೋದು. ಭಾರತದ ವಿರುದ್ಧ ಮಸಲತ್ತು ಮಾಡುತ್ತಲೇ ಬರ್ತಿರೋ ಉಗ್ರರ ವಿರುದ್ಧ ಕ್ಷಿಪಣಿ ದಾಳಿ ನಡೆಸುವ ಯೋಜನೆಯೂ ಭಾರತದ ಬಳಿ ಇದೆ. ಅತ್ಯಾಧುನಿಕ ಮಿಸೈಲ್ ಸಿಸ್ಟಂ ಹೊಂದಿರುವ ಭಾರತ ಉಗ್ರರ ಮೇಲೆ ಸಂಘಟಿತವಾಗಿ ಕ್ಷಿಪಣಿ ದಾಳಿ ನಡೆಸಿ ಪಿಒಕೆಯನ್ನು ಕಬ್ಜಾ ಮಾಡೋ ಅವಕಾಶವೂ ಇದೆ.
ಪಾಕ್ ವಿರುದ್ಧ ಭಾರತೀಯ ಸೇನೆಯ ಪ್ರಹಾರ
ಇನ್ನು ಕ್ಷಮೆ ಅನ್ನೋ ಪದಕ್ಕೆ ಅರ್ಥವೇ ಗೊತ್ತಿಲ್ಲದ ಪಾಕ್ ವಿಚಾರದಲ್ಲಿ ಈ ಬಾರಿ ಕಠಿಣಾತಿ ಕಠಿಣ ಕ್ರಮಕ್ಕೆ ಮುಂದಾಗೋದು. ಅದ್ರಲ್ಲೂ ಉಗ್ರರಿಗೆ ನೆಲೆ ನೀಡಿರೋ ಆರೋಪಕ್ಕೆ ಜಗತ್ತಿನ ಮುಂದೆ ಸಾಕ್ಷ್ಯ ತೆರೆದಿಟ್ಟು, ನೇರ ಪಾಕಿಸ್ಥಾನಕ್ಕೆ ಭಾರತೀಯ ಸೇನೆಯನ್ನೇ ನುಗ್ಗಿಸಿ ಪ್ರತೀಕಾರ ತೀರಿಸಿಕೊಳ್ಳೋದು.
ಪಾಕ್ ನೌಕಾ ಬಲವನ್ನೇ ಬುಡಮೇಲು ಮಾಡುವುದು
ಇನ್ನು ಪಾಕಿಸ್ಥಾನದ ವಿರುದ್ಧ ಪ್ರತೀಕಾರಕ್ಕೆ ಮುಂದಾದ್ರೆ, ಅಲ್ಲಿನ ನೌಕಾ ಪಡೆಯನ್ನೇ ಜಲಸಮಾಧಿ ಮಾಡೋದು. ಭಾರತೀಯ ನೌಕಾ ಪಡೆ ಮೂಲಕ ದಾಳಿ ನಡೆಸಿ, ಕರಾಚಿಯಲ್ಲಿರುವ ಪಾಕ್ ನೌಕಾ ಶಕ್ತಿಯನ್ನೇ ಮುಳುಗಿಸಿದ್ರೆ, ನೆರೆ ರಾಷ್ಟ್ರ ಅಶಕ್ತವಾಗಲಿದೆ. ಈ ಒಂದು ಆಯ್ಕೆಯೂ ಭಾರತದ ಮುಂದಿದೆ. ಇದಲ್ಲದೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ಇಲ್ಲವೇ ಏರ್ ಸ್ಟ್ರೈಕ್ ಮಾಡುವ ಆಯ್ಕೆಗಳೂ ಭಾರತದ ಮುಂದಿದೆ. ಆದ್ರೆ ಪ್ರಧಾನಿ ಮೋದಿ ಬತ್ತಳಿಕೆಯಲ್ಲಿರುವ ಆ ಬ್ರಹ್ಮಾಸ್ತ್ರ ಯಾವುದು ಅನ್ನೋದಿನ್ನೂ ಅಸ್ಪಷ್ಟ. ಇದರಲ್ಲಿ ಯಾವುದೊಂದು ಘಟಿಸಿದ್ರೂ ಪಾಕ್ ಅಸ್ತಿತ್ವವೇ ಅಲುಗಾಡುವುದು ಸತಸಿದ್ಧ.



















