ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಂವ್‍ನಲ್ಲಿ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಅವರ ಹೆಸರನ್ನು ಹಾಗೂ ಧರ್ಮವನ್ನು ಕೇಳಿ ಖಾತರಿಪಡಿಸಿಕೊಂಡು ಹಿಂದೂಗಳನ್ನು ಅಥವಾ ಇಸ್ಲಾಮೇತರರನ್ನು ಗುರಿಯಾಗಿಸಿಕೊಂಡು ಹತ್ಯೆಮಾಡಿರುವುದು ಖಂಡನೀಯ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂ ಹೆಸರಿನಲ್ಲಿ ಜಾಗತಿಕ ಭಯೋತ್ಪಾದನೆ ನಡೆಯುತ್ತಿದ್ದು, ಯಾವ ಕಾರಣಕ್ಕೆ ನಡೆಯುತ್ತಿದೆ ಎಂಬುದಕ್ಕೆ ಮತ್ತಷ್ಟು ಸಾಕ್ಷಿಯ ಅವಶ್ಯಕತೆ ಇಲ್ಲ. ಸದರಿ ಭಯೋತ್ಪಾದಕರು ದಾಳಿಯ ಸಂದರ್ಭದಲ್ಲಿ ನಿಮ್ಮ ಭಾಷೆ ಯಾವುದು ಎಂದು ಕೇಳಲಿಲ್ಲ; ನಿಮ್ಮ ಜಾತಿ ಯಾವುದು ಎಂದು ಕೇಳಲಿಲ್ಲ; ನೀವು ತಮಿಳುನಾಡಿನಿಂದ ಬಂದಿದ್ದೀರಾ? ಕೇರಳದಿಂದ ಬಂದಿದ್ದೀರಾ? ಅಥವಾ ಕರ್ನಾಟಕದಿಂದ ಬಂದಿದ್ದೀರಾ? ಎಂದು ಪ್ರದೇಶವನ್ನು ಕೇಳಿಲ್ಲ ಎಂದರು.
ಪತ್ನಿಯ ಎದುರುಗಡೆ ಪತಿಯನ್ನು, ಚಿಕ್ಕಮಕ್ಕಳ ಎದುರು ತಂದೆಯನ್ನು ಕೊಲ್ಲುವುದರ ಮೂಲಕ ನಮಗೆ ಮಾನವೀಯತೆ ಇಲ್ಲ; ಮಾನವೀಯತೆಗೂ ನಮಗೂ ಸಂಬಂಧ ಇಲ್ಲ. ಅನ್ನುವ ರಾಕ್ಷಸಿ ಮನೋಭಾವವನ್ನು ಭಯೋತ್ಪಾದಕರು ತೋರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಭಯೋತ್ಪಾದಕ ಚಟುವಟಿಕೆ ನಡೆದಾಗ ಅದನ್ನು ಖಂಡಿಸಿ ಶೋಕವ್ಯಕ್ತಪಡಿಸಿ ಅಮೇಲೆ ನಾವು ಮರೆತುಬಿಡುತ್ತೇವೆ. ಆ ಕುಟುಂಬಗಳಿಗೆ ಸಾಂತ್ವನ ಹೇಳಿ ಒಂದಷ್ಟು ಪರಿಹಾರ ಕೊಟ್ಟು ನಾವು ಮರೆತುಬಿಡುತ್ತೇವೆ. ಇದರಲ್ಲಿ ಯಾವ ಯಾವ ರಾಜ್ಯದವರು ಎಷ್ಟು ಜನ, ಯಾವ ಜಾತಿಗೆ ಸೇರಿದವರು ಎಂದು ಲೆಕ್ಕಹಾಕುತ್ತೇವೆ; ಆದರೆ, ಭಯೋತ್ಪಾದಕರ ದೃಷ್ಟಿಗೆ ಇಸ್ಲಾಂ ಹೊರತುಪಡಿಸಿ ಉಳಿದವರೆಲ್ಲರೂ ಕಾಫಿರರು ಮತ್ತು ಈ ಭಯೋತ್ಪಾದನೆಗೆ ಬಹಳ ದೊಡ್ಡ ಇತಿಹಾಸವಿದೆ ಎಂದು ತಿಳಿಸಿದರು.
ಮೊಹಮದ್ ಗಜನಿ, ಘೋರಿ, ಖಿಲ್ಜಿ, ಔರಂಗಜೇಬ್, ಟಿಪ್ಪು ಇವರೆಲ್ಲರೂ ರಾಜಕೀಯ ಸಾಮಥ್ರ್ಯದ ಮೇಲೆ ಭೀತಿ ಹುಟ್ಟಿಸುವಂತಹ ಹಾಗೂ ಹತ್ಯೆ ಮಾಡುವ ಸಾಮೂಹಿಕ ನರಮೇಧ ಮಾಡುವ ಕೆಸಲ ಮಾಡಿದ್ದರು. ಜೊತೆಗೆ ಮತಾಂತರ ಮಾಡುವ ಕೆಲಸ ಮಾಡಿದ್ದರು ಎಂದು ಟೀಕಿಸಿದರು.
ನಾವು ಈ ಘಟನೆಗೆ ಕಾರಣರಾದ ನಾಲ್ಕು ಜನ ಭಯೋತ್ಪಾದಕರನ್ನು ಹುಡುಕಿ ಕೊಂದು ಬಿಡಬಹುದು. ಆದರೆ ಭಯೋತ್ಪಾದನೆ ನಿಲ್ಲುತ್ತದೆಯೇ? ಹೊಸ ರೂಪದಲ್ಲಿ, ಹೊಸ ಸಂಘಟನೆ ಹೆಸರಿನಲ್ಲಿ, ಹೊಸ ಜನರು ರಕ್ತಬೀಜಾಸುರರ ರೀತಿಯಲ್ಲಿ ಹುಟ್ಟುತ್ತಾರೆ. ಹಾಗಾದರೆ ಆ ರಕ್ತಬೀಜಾಸುರನಿಗೆ ಆ ಶಕ್ತಿ ಬಂದಿದ್ದು ಎಲ್ಲಿಂದ?. ಆ ಶಕ್ತಿಯನ್ನು ಕೊನೆಗಾಣಿಸದೇ ಇದ್ದರೆ. ನಿರ್ಮೂಲನೆ ಮಾಡದೇ ಇದ್ದರೆ. ಅದನ್ನು ಬದಲಾಯಿಸದೇ ಇದ್ದರೆ ಭಯೋತ್ಪಾದನೆ ನಿಲ್ಲುವುದಿಲ್ಲ. ಇದು ಕಟು ಸತ್ಯ. ಇದು ವಾಸ್ತವಿಕ ಸತ್ಯ ಎಂದು ವಿಶ್ಲೇಷಿಸಿದರು.
ಎಲ್ಲಾ ಮತಗಳಲ್ಲಿರುವಂತಹ ಅಸಹಿಷ್ಣುತೆಯನ್ನು ಕಿತ್ತುಹಾಕಿ. ಭಗವದ್ಗೀತೆ, ವಚನಗಳು, ವೇದಗಳಲ್ಲಿ ಅಸಹಿಷ್ಣುತೆ ಇದ್ದಲ್ಲಿ ಕಿತ್ತುಹಾಕಿ. ಹಾಗೆಯೇ ಕುರಾನ್‍ನಲ್ಲಿರುವಂತಹ ಅಸಹಿಷ್ಣುತೆಯನ್ನು ಕಿತ್ತುಹಾಕುವ ಧೈರ್ಯ ಮಾಡುತ್ತೀರ? ಅಸಹಿಷ್ಣುತೆ ಇಲ್ಲವೇ; ಬೈಬಲ್‍ನಲ್ಲಿರುವ ಅಸಹಿಷ್ಣುತೆಯನ್ನು ಕಿತ್ತುಹಾಕುವ ಧೈರ್ಯ ಮಾಡುತ್ತೀರ? ಎಂದು ಕೇಳಿದರು. ಅದನ್ನು ಬದಲಾಯಿಸದೇ ಇದ್ದರೆ ಈ ರಕ್ತಬಿಜಾಸುರರು ಹೊಸ ರೀತಿಯಲ್ಲಿ ಹುಟ್ಟುತ್ತಲೇ ಇರುತ್ತಾರೆ. ಅಲ್ಲಿಯವರೆಗೂ ಜಗತ್ತಿನಲ್ಲಿ ಶಾಂತಿ ನೆಲಸಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಇವತ್ತು ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್, ಮಧುಸೂದನ್ ಹಾಗೂ ಬೇರೆ ಬೇರೆ ರಾಜ್ಯದ 25ಕ್ಕೂ ಹೆಚ್ಚು ಜನÀರ ಹತ್ಯೆಯಾಗಿದೆ. ಇದಕ್ಕೂ ಮುಂಚೆ ಪುಲ್ವಾಮದಲ್ಲಿ ಸೈನಿಕರು, ರೈಲ್ವೆ ಸ್ಟೇಷನ್‍ನಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಕ್ಕೆ ಬಲಿಯಾದ ಜ£ರು, ಹಲವಾರು ಜ£ರ ಹತ್ಯೆಯಾಗಿದೆ. ಇದು ಎಲ್ಲಿಯವರೆಗೂ ನಿಲ್ಲುತ್ತದೆ ಎಂದು ಕೇಳಿದರು. ಇವರೆಲ್ಲರೂ ಬಲಿಯಾಗಿದ್ದು ಇಸ್ಲಾಂ ಧರ್ಮವನ್ನು ಸ್ವೀಕರಿಸಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿದವರು ನೆಮ್ಮದಿಯಿಂದ ಇದ್ದಾರೆಯೇ? ಎಂದು ಪ್ರಶ್ನಿಸಿದರು.
ಈಗಲಾದರೂ ನಿಮ್ಮ ಅಸ್ತಿತ್ವಕ್ಕೆ ಅಪಾಯ ಬಂದಿದೆ ಎಂದು ಅರ್ಥ ಮಾಡಿಕೊಂಡು ನಾವು ಒಂದಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುವ ಅವಶ್ಯಕತೆಯಿದೆ. ಯಾವುದೇ ರೂಪದಲ್ಲಿ ಭಯೋತ್ಪಾದಕರಿಗೆ ಕರುಣೆ ತೋರಿಸದೆ ಅವರನ್ನು ಮಟ್ಟಹಾಕಬೇಕು ಎಂದು ಅಗ್ರಹಿಸಿದರು.


















