ʻಬಿಗ್ ಬಾಸ್ ಕನ್ನಡ ಓಟಿಟಿʼ ಮತ್ತು ʻಬಿಗ್ ಬಾಸ್ ಕನ್ನಡ ಸೀಸನ್ 9’ರ ಖ್ಯಾತಿಯ ನಟಿ ಅಮೂಲ್ಯ ಗೌಡ ಸದ್ಯ ತೆಲುಗು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಆಡಿಯನ್ಸ್ ಗಳಿಗೂ ಚಿರಪರಿಚಿತರಾಗಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಆಕ್ಟೀವ್ ಆಗಿದ್ದಾರೆ.
ಅಮೂಲ್ಯ ಗೌಡ ಅವರು ʻಕಮಲಿʼ ಧಾರಾವಾಹಿ ಖ್ಯಾತಿಯ ನಿರಂಜನ್ ಬಿಎಸ್ ಅವರ ಜೊತೆಗೆ ಲವ್ ನಲ್ಲಿದ್ದಾರೆ ಎಂದು ಹಲವು ವರ್ಷಗಳಿಂದಲೂ ಗಾಸಿಪ್ ಹರಿದಾಡುತ್ತಿವೆ. ಯೆಸ್.. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಅಮೂಲ್ಯ ಗೌಡಗೆ, “ನೀವು ಮತ್ತು ನಿರಂಜನ್ ಪ್ರೀತಿಯಲ್ಲಿ ಇರುವುದು ನಿಜಾನಾ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಅಮೂಲ್ಯ, ನನ್ನ ಪುಟ್ಟ ಪ್ರಪಂಚದಲ್ಲಿ ನಿರಂಜನ್ ಕೂಡ ಒಬ್ಬರು. ಇವಾಗಿನಿಂದಲ್ಲ, ʻಕಮಲಿʼ ಧಾರಾವಾಹಿ ಮಾಡಿದಾಗಿನಿಂದಲೂ ನಮ್ಮ ಫ್ಯಾಮಿಲಿಗೆ ನಿರಂಜನ್ ಗೊತ್ತು. ಅವರ ಫ್ಯಾಮಿಲಿಗೆ ನಾನು ಗೊತ್ತು. ಬಟ್ ನಾವು ಲವ್ ಮಾಡುತ್ತಿದ್ದೀವಾ? ಅಥವಾ ಇಲ್ಲವಾ? ಎನ್ನುವುದು ನನಗೆ ಗೊತ್ತಿಲ್ಲ. ಲವ್ ಆದರೂ ಆಗಬಹುದು, ಯಾಕೆ ಆಗಬಾರದು” ಎನ್ನುತ್ತಾ ನಾಚಿ ನೀರಾಗಿದ್ದಾರೆ.
ಕಮಲಿ ಖ್ಯಾತಿಯ ಅಮೂಲ್ಯ ಗೌಡ, ತೆಲುಗು ಸೀರಿಯಲ್ ನಲ್ಲೂ ಜನಪ್ರಿಯತೆ ಗಳಿಸಿದ ನಟಿ. ಅಮೂಲ್ಯ ತೆಲುಗಿನ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಅಮೂಲ್ಯ ಹಾಗೂ ನಿರಂಜನ್ ಕುರಿತಾದ ಒಂದು ಗುಟ್ಟು ರಟ್ಟಾಗಿದೆ. ಇದನ್ನು ನೋಡಿದರೆ ಇವರಿಬ್ಬರು ಒಬ್ಬರನ್ನೊಬ್ಬರು ಲವ್ ಮಾಡುತ್ತಿದ್ದಾರೆ. ನಿರೂಪಕಿ ಅಮೂಲ್ಯ ಬಳಿ ನಿಮ್ಮ ಫೋನ್ ನಲ್ಲಿ ನಿರಂಜನ್ ಹೆಸರು ಏನಂತ ಇದೆ ಎಂದು ಕೇಳಿದಾಗ, ನನ್ನ ಟಾಮ್ ಅಂತ ಅಮೂಲ್ಯ ಸೇವ್ ಮಾಡಿದ್ದಾರೆ. ನಿರಂಜನ್ ಕೂಡ ತೆಲುಗು ಸೀರಿಯಲ್ ಗಳಲ್ಲಿ ನಟಿಸಿದ್ದು, ನಿರಂಜನ್ ಗೆ ಕಾಲ್ ಮಾಡುವುದಕ್ಕೆ ನಿರೂಪಕಿ ತಿಳಿಸಿದಾಗ, ಅಮೂಲ್ಯ ಕಾಲ್ ಮಾಡುತ್ತಿದ್ದಂತೆ, ಪ್ರೋಗ್ರಾಮ್ ನಲ್ಲಿದ್ದೇನೆ. ಫೋನ್ ಸ್ಪೀಕರ್ ನಲ್ಲಿದೆ ಎಂದಿದ್ದಾರೆ. ಆವಾಗಲೇ ಎಲ್ಲರಿಗೂ ಡೌಟ್ ಬಂದಿದೆ. ಬಳಿಕ ಇಬ್ಬರು ಹೇಗಿದ್ದೀರಾ? ಚೆನ್ನಾಗಿದ್ದೀರಾ ಎಂದು ಮಾತನಾಡಿದ್ದಾರೆ. ನಟಿ ಅಮೂಲ್ಯ ಅವರು 2014 ರಲ್ಲಿ ಸ್ವಾರ್ ಸ್ವಾತಿಮುತ್ತು ಸೀರಿಯಲ್ ಗೆ ಮೊದಲ ಬಾರಿಗೆ ಬಣ್ಣ ಹಚ್ಚಿ ಕಿರುತರೆಗೆ ಎಂಟ್ರಿಕೊಟ್ಟರು. ನಂತರ ಅರಮನೆ, ಪುನರ್ ವಿವಾಹ ಎಂಬ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಕಮಲಿ ಧಾರಾವಾಹಿ ಮೂಲಕ ಮೋಡಿ ಮಾಡಿದರು. ಇನ್ನು ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ನಟಿಸಿದ್ದಾರೆ.



















