ಪತ್ನಿಯಿಂದ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಗಂಡನ ಬಗ್ಗೆ ಪತ್ನಿ ಮಾಡಿರುವ ಮೆಸೇಜ್ ಗಳು ವೈರಲ್ ಆಗಿವೆ.
ನನ್ನ ಗಂಡನಿಗೆ ಮಸ್ತಾನ್ ಎಂಬ ಭಯೋತ್ಪಾದಕ ಸೇರಿದಂತೆ ಹಲವು ಉಗ್ರಗಾಮಿಗಳೊಂದಿಗೆ ಸಂಪರ್ಕ ಇದೆ. ಈ ಬಗ್ಗೆ ತನಿಖೆ ನಡೆಸಬೇಕು. ಈ ಪ್ರಕರಣದ ಮುಂದೆ ರನ್ಯಾ ರಾವ್ ಪ್ರಕರಣ ಏನೂ ಅಲ್ಲ ಎಂದು ವಾಟ್ಸಪ್ ಸಂದೇಶದಲ್ಲಿ ಹೇಳಿದ್ದರು ಎಂದು ತಿಳಿದು ಬಂದಿದೆ.
ಈ ಕೂಡಲೇ ಓಂ ಪ್ರಕಾಶ್ ರಿವಾಲ್ವರ್ ವಶಪಡಿಸಿಕೊಳ್ಳಬೇಕು. ನಮ್ಮ ಮೊಬೈಲ್ ಹ್ಯಾಕ್ ಮಾಡುವ ಮುನ್ನ ಈ ಸಂದೇಶವನ್ನು ಹಂಚಬೇಕು. ನನ್ನ ಸುತ್ತಲೂ ಅವರು ಏಜೆಂಟ್ ಗಳನ್ನು ಬಿಟ್ಟಿದ್ದಾರೆ. ನಾನೆಲ್ಲೇ ಹೋದರೂ ಅವರ ಕಣ್ಗಾವಲಿನಲ್ಲಿಯೇ ಇರಬೇಕಾಗಿದೆ. ನನಗೆ ಜೀವ ಬೆದರಿಕೆ ಇದ್ದು ಕೇಂದ್ರ ಸರ್ಕಾರ ಓಂ ಪ್ರಕಾಶ್ ಮೇಲೆ ಕ್ರಮ ಕೈಗೊಳಗ್ಳಬೇಕೆಂದು ಪಲ್ಲವಿ ಮೆಸೇಜ್ ನಲ್ಲಿ ಹೇಳಿಕೊಂಡಿದ್ದರು ಎಂಬುವುದು ಈಗ ತಿಳಿದು ಬಂದಿದೆ.