ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದು, ಜಸ್ಟ್ ಮಿಸ್ ಆಗಿದ್ದಾರೆ.
ಸದ್ಯ ಈ ಪ್ರಕರಣದ ಕುರಿತು ಬಿಡದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಿಕ್ಕಿ ರೈ ಹಿನ್ನೆಲೆ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಘಟನೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ಹಾಗಾದರೆ, ರಿಕ್ಕಿ ರೈ ಮೇಲೆ ದಾಳಿ ನಡೆಸಿದವರು ಯಾರು? ಎಂಬ ಕುರಿತು ಪೊಲೀಸರು ತನಿಖೆಗೆ ಇಳಿದಿದ್ದಾರೆ. ಮೂವರ ಮೇಲೆ ಪೊಲೀಸರು ಹದ್ದಿನಗಣ್ಣು ಇಟ್ಟಿದ್ದಾರೆ.
ಅಲ್ಲದೇ, ರಿಕ್ಕಿ ರೈ ವಿರುದ್ಧ ದಾಖಲಾದ ದೂರುಗಳ ಬಗ್ಗೆಯೂ ಪೊಲೀಸರು ತನಿಖೆಗೆ ಇಳಿದಿದ್ದಾರೆ. ರಿಕ್ಕಿ ರೈ ಮೇಲೆ ಮೂರು ಪ್ರಕರಣಗಳು ಕೂಡ ದಾಖಲಾಗಿರುವುದು ಗೊತ್ತಾಗಿದೆ.
ಪ್ರಕರಣ 1
ಈ ಹಿಂದೆ ಸದಾಶಿವನಗರಲ್ಲಿ ರಿಕ್ಕಿರೈ ವಿರುದ್ಧ ಧಮ್ಕಿ ಹಾಗೂ ಹಲ್ಲೆ ಆರೋಪ ದಾಖಲಾಗಿತ್ತು. ಶ್ರೀನಿವಾಸ ನಾಯ್ಡು ಎಂಬುವವರ 3 ಕೋಟಿ ರೂ. ಕಾರಿಗೆ ರಿಕ್ಕಿ ರೈ ಸುಪಾರಿ ಕೊಟ್ಟು ಬೆಂಕಿ ಹಚ್ಚಿಸಿದ್ದ ಆರೋಪ ಇದೆ. ಅಲ್ಲದೇ, ಶ್ರೀನಿವಾಸ ನಾಯ್ಡು ಮೇಲೆ ಹಲ್ಲೆ ಕೂಡ ರಿಕ್ಕಿ ರೈ ಮಾಡಿದ್ದ. ರಿಚ್ಮಂಡ್ ಟೌನ್ ಕಾಜೆ ಬಾರ್ ಅಂಡ್ ಕಿಚನ್ ನಲ್ಲಿ ಶ್ರೀನಿವಾಸ್ ನಾಯ್ಡು ಮೇಲೆ ರಿಕ್ಕಿರೈ ಅಂಡ್ ಟೀಂ ಹಲ್ಲೆ ಮಾಡಿತ್ತು. ಈಗ ಇಬ್ಬರ ಮಧ್ಯೆದ ದ್ವೇಷ ಸರಿ ಹೋಗಿದೆ ಎಂದು ಅವರ ಆತ್ಮೀಯರು ಹೇಳುತ್ತಿದ್ದಾರೆ.
ಪ್ರಕರಣ 2
ಜಮೀನು ವಿವಾದ ಸಂಬಂಧ ರಾಕೇಶ್ ಮಲ್ಲಿಗೂ ರಿಕ್ಕಿರೈಗೂ ವೈಷಮ್ಯವಿದೆ. ಹೀಗಾಗಿ ಪೊಲೀಸರಿಗೆ ರಾಕೇಶ್ ಮಲ್ಲಿ ಮೇಲೆ ಅನುಮಾನವಿದ್ದು, ರಾಕೇಶ್ ಮಲ್ಲಿ ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ರಿಕ್ಕಿ ರೈ ಮೇಲೆ 2021 ರಲ್ಲಿ ರಾಕೇಶ್ ಮಲ್ಲಿ, ಮಂಗಳೂರು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊಲೆ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದರು. ಇವರಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಹೀಗಾಗಿ ರಾಕೇಶ್ ಮಲ್ಲಿ ಮೇಲೆ ರಿಕ್ಕಿರೈ ಕುಟುಂಬಸ್ತರಿಗೆ ದಟ್ಟವಾದ ಅನುಮಾನವಿದೆ.
ಪ್ರಕರಣ 3
ಪ್ರಾಪರ್ಟಿ ಡಿಸ್ಪೂಟ್ ಗೆ ಸಂಬಂಧಿಸಿದಂತೆ ಚಿಕ್ಕಮ್ಮನ ಮೇಲೆ ಕೂಡ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಮುತ್ತಪ್ಪ ರೈ ವಿಲ್ ಬರೆದಿಟ್ಟಿದ್ದರು. ಆದರೆ, ಜಮೀನು ಹಂಚಿಕೆಯಲ್ಲಿ ಚಿಕ್ಕಮ್ಮ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ರಿಕ್ಕಿರೈ ಚಿಕ್ಕಮ್ಮ ಹಾಗೂ ರಾಕೇಶ್ ಮಲ್ಲಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.