ರಾಜ್ಯದಲ್ಲಿ ವೀರಶೈವ ಲಿಂಗಾಯತರನ್ನು ಹಾಗೂ ಒಕ್ಕಲಿಗರನ್ನು ಎದುರಾಕಿಕೊಂಡು ರಾಜ್ಯಭಾರ ಮಾಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯಲ್ಲಿ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಅವರು ಸುಮ್ಮನೆ ಬಿಡುಗಡೆ ಮಾಡ್ತೀವಿ ಅಂತಾ ಹೇಳ್ತಾ ಇದ್ದಾರೆ. ರಾಜ್ಯದಲ್ಲಿ ಫಸ್ಟ್ ಲಿಂಗಾಯತರು ಸೆಕೆಂಡ್ ಒಕ್ಕಲಿಗರು ಇದ್ದಾರೆ. ಅವರು ನಮ್ಮನ್ನು ಎದುರಾಕಿಕೊಂಡು ರಾಜ್ಯಾಭಾರ ಮಾಡೋಕೆ ಆಗುತ್ತಾ? ಲಿಂಗಾಯತರು ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡುತ್ತೇವೆ. ಈಗಾಗಲೇ ವೀರಶೈವ ಲಿಂಗಾಯತ ಮಹಾಸಭಾ ಈ ಕುರಿತು ಸಭೆ ನಡೆಸಿದ್ದು, ಬಿಡುಗಡೆ ಮಾಡಿದರೆ ಹೋರಾಟ ನಡೆಸುತ್ತೇವೆ ಎಂದಿದ್ದಾರೆ.