ಕೋಲ್ಕತ್ತಾ: ವಕ್ಫ್ ಕಾಯ್ದೆ (Waqf Act) ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ (West Bengal) ನಡೆಯುತ್ತಿರುವ ಹೋರಾಟ ಹಿಂಸಾರೂಪ ತಾಳಿದ್ದು, ಕೋಮು ಸಂಘರ್ಷಕ್ಕೆ ಕಾರಣವಾಗಿದೆ.
ಮುರ್ಷಿದಾಬಾದ್ ನಲ್ಲಿ ಮುಸ್ಲಿಂ (Muslims) ಬಾಹುಳ್ಯವಿರುವ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ, ಹಿಂಸೆ ನೀಡುವುದು ನಡೆಯುತ್ತಿದೆ. ಬೆಂಕಿ ಹಚ್ಚಲಾಗುತ್ತಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ. ಲೂಟಿಗಳು ಕೂಡ ಶುರುವಾಗಿವೆ ಎನ್ನಲಾಗಿದೆ. ಹೀಗಾಗಿ ಹಿಂದೂಗಳು ಹೆದರಿ ಮನೆ ತೊರೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸುತಿ, ಧುಲಿಯಾನ್, ಜಂಗೀಪುರ, ಶಂಶೇರ್‌ಗಂಜ್ ಪ್ರದೇಶಗಳಿಂದ ಹಿಂದೂಗಳು ವಲಸೆ ಹೋಗುತ್ತಿದ್ದಾರೆ. ಹಿಂದೂಗಳು ಭಾಗೀರಥಿ ನದಿ ದಾಟಿ ಪ್ರಾಣ ಉಳಿಸಿಕೊಂಡಿದ್ದಾರೆ. ಮಾಲ್ಡಾ ಸೇರಿ ವಿವಿಧೆಡೆ ಬಂಧುಗಳ ಮನೆ, ಶಾಲೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಈ ಜನರಿಗೆ ಸಹಾಯ ಮಾಡುವುದಕ್ಕಾಗಿ ನದಿ ದಡದಲ್ಲಿ ಸ್ವಯಂ ಸೇವಕರನ್ನು ಕೂಡ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಹಲವರು ಹಲವು ರೀತಿಯಲ್ಲಿ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಹಿಂದೂಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸುದ್ದಿ ಹಬ್ಬುತ್ತಿದ್ದಂತೆ ಇಡೀ ದೇಶಾದ್ಯಂತ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.