ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಪೀಣ್ಯಾದ ಚಿತಾಗಾರದಲ್ಲಿ ಮರಾಠಾ ಕ್ಷತ್ರೀಯ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಯಿತು. ಪುತ್ರ ಗುರುಪ್ರಸಾದ್ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ನಟನ ಅಂತ್ಯಕ್ರಿಯೆಯಲ್ಲಿ ಟೆನ್ನಿಸ್ ಕೃಷ್ಣ, ಗಣೇಶ್ ರಾವ್, ಡಿಂಗ್ರಿ ನಾಗರಾಜ್ ಸೇರಿದಂತೆ ಹಲವರು ಇದ್ದರು.
3ನೇ ದಿನದ ಕಾರ್ಯ ಬುಧವಾರ ಬೆಳಗ್ಗೆ 8ಕ್ಕೆ ನಡೆಯಲಿದೆ. ಅಸ್ಥಿ ವಿಸರ್ಜನೆಗೆ ಶ್ರೀರಂಗಪಟ್ಟಣಕ್ಕೆ ಹೋಗುತ್ತವೆ. 11ನೇ ದಿನದ ಕಾರ್ಯ ನಮ್ಮ ಮನೆಯಲ್ಲಿಯೇ ನಡೆಯಲಿದೆ ಎಂದು ಬ್ಯಾಕ್ ಜನಾರ್ಧನ್ ಪುತ್ರ ಹೇಳಿದ್ದಾರೆ. ಇತ್ತೀಚೆಗೆ ನಟ ಬ್ಯಾಂಕ್ ಜನಾರ್ಧನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ನಿನ್ನೆ ರಾತ್ರಿ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಜನಾರ್ಧನ್ ಅವರು ಸುಮಾರು 800ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕೂಡ ನಟಿಸಿದ್ದಾರೆ.