ಮೊಹಲಿ: ಚೆನ್ನೈ ತಂಡ ಮತ್ತೊಮ್ಮೆ ಮುಗ್ಗರಿಸಿದೆ. ಪ್ರಿಯಾಂಶ್ ಆರ್ಯ ಶತಕದಾಟದ ನೆರವಿನಿಂದ ಚೆನ್ನೈ ತಂಡವು ಪಂಜಾಬ್ ವಿರುದ್ಧ ಪಂಜಾಬ್ 18 ರನ್ ಗಳ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಮಾತ್ರ ಗಳಿಸಿ ಸೋಲು ಕಂಡಿದೆ. ಪಂಜಾಬ್ ಪರ ಪ್ರಿಯಾಂಕ್ ಆರ್ಯನ ಶತಕದ ಆಟ (103 ರನ್, 42 ಬಾಲ್, 7 ಫೋರ್, 9 ಸಿಕ್ಸರ್) ಪಂಜಾಬ್ ನಗೆ ಬೀರುವಂತೆ ಮಾಡಿತು.
ಅಲ್ಲದೇ, ಶಶಾಂಕ್ ಸಿಂಗ್ (52), ಮಾರ್ಕೊ ಜಾನ್ಸೆನ್ (34) ತಂಡದ ಮೊತ್ತ 200 ಗಡಿ ದಾಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಚೆನ್ನೈ ಪರ ಖಲೀಲ್ ಅಹ್ಮದ್, ಆರ್.ಅಶ್ವಿನ್ ತಲಾ 2, ಮುಕೇಶ್ ಚೌಧರಿ, ನೂರ್ ಅಹ್ಮದ್ ತಲಾ 1 ವಿಕೆಟ್ ಪಡೆದು ಮಿಂಚಿದರು.
ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 1, ರಚಿನ್ ರವೀಂದ್ರ 36, ಕಾನ್ವೆ 69, ದುಬೆ 42 ರನ್ ಗಳಿಸಿದರು. ಎಂ.ಎಸ್. ಧೋನಿ 12 ಬಾಲ್‌ಗೆ 27 ರನ್ ಗಳಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿ ಹೋದರು. ಕೊನೆಗೂ ಚೆನ್ನೈ ತಂಡ 201 ರನ್ ಗಳಿಸಿ ಸೋಲು ಕಂಡಿತು.



















