ಬೆಂಗಳೂರು: ಅದು ಭಾರತದಲ್ಲಷ್ಟೇ ಯಾಕೆ ಏಷ್ಯಾದ ಅತ್ಯಂತ ದುಬಾರಿ ನಿವಾಸ. ಬರೋಬ್ಬರಿ 15 ಸಾವಿರ ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಮನೆ ಮೇಲೆ ಈಗ ತೂಗುಗತ್ತಿ ನೇತಾಡುತ್ತಿದೆ. ಹೌದು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಮುಕೇಶ್ ಅಂಬಾನಿ ಮನೆ ತೊರೆಯಬೇಕಾದ ಅನಿವಾರ್ಯತೆಗೆ ಸಿಲುಕಿದರಾ? ಮುಂಬೈನ ಅತ್ಯಂತ ವೈಭವೋಪೇತ ನಿವಾಸ ಆಂಟಿಲಿಯಾ ತೊರೆಯಬೇಕಾಗಿ ಬರುತ್ತಾ ಅಂಬಾನಿ ಕುಟುಂಬ.
ವಕ್ಫ್ ತಿದ್ದುಪಡಿ ಮಸೂದೆಯೇ ಅಂಬಾನಿಗೆ ಸಂಚಕಾರವಾ?
ಮುಂಬೈನ ಸುಪ್ರಸಿದ್ಧ ಪ್ರೈಡ್ ರಸ್ತೆಯಲ್ಲಿರುವ ಆಂಟಿಲಿಯಾ ಹೊಸದೊಂದು ಸಂಕಷ್ಟಕ್ಕೆ ಸಿಲುಕಿದೆ. ಅಂಬಾನಿ ಕುಟುಂಬ ವಾಸವಾಗಿರುವ ಮನೆಯ ಜಮೀನು ವಕ್ಫ್ ಮಂಡಳಿ ಅಸ್ತಿ ಅನ್ನುವುದೇ ಈಗಿರುವ ದೊಡ್ಡ ತಲೆನೋವು. ಮೊನ್ನೆಯಷ್ಟೇ ಸುದೀರ್ಘ ಚರ್ಚೆ ಬಳಿಕ ಅಂಗೀಕಾರವಾಗಿರುವ ವಕ್ಫ್ ತಿದ್ದುಪಡಿ ಮಸೂದೆಯೇ ಅಂಬಾನಿ ಮನೆ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದೆ. 15 ಸಾವಿರ ಕೋಟಿಯ ಈ ಅರಮನೆ ವಕ್ಫ್ ಬೋರ್ಡ್ ಗೆ ಸೇರಿದ್ದ ನಿವೇಶನ ಎನ್ನುವುದು ಈಗಿರುವ ಚರ್ಚೆ. ವಕ್ಫ್ ಆಸ್ತಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಬಾರದು ಅನ್ನೋದು ನಿಯಮವಾಗಿದೆ.
ಸುಪ್ರೀಂಕೋರ್ಟ್ ನಲ್ಲಿ ನಡೆದಿದೆ ಸುದೀರ್ಘ ವಾದ
ಅಂಬಾನಿ ಮನೆ ಕಟ್ಟಿರುವ ನಿವೇಶನದ ಮೂಲ ಮಾಲೀಕರು ಕರೀಂ ಭಾಯಿ ಇಬ್ರಾಹಿಂ. ಈ ನಿವೇಶನವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿಯೋ? ಇಲ್ಲಾ ಅನಾಥಾಶ್ರಮ ಕಟ್ಟುವ ಉದ್ದೇಶಕ್ಕಾಗಿಯೋ? ಬಳಸಿಕೊಳ್ಳುವಂತೆ ಕರಾರು ಮಾಡಿ ವಕ್ಫ್ ಬೋರ್ಡ್ ಗೆ ದಾನ ನೀಡಿದರು. 2002ರಲ್ಲಿ ಈ ಆಸ್ತಿಯನ್ನು ಅಂಬಾನಿ 21 ಕೋಟಿ ನೀಡಿ ತಮ್ಮದಾಗಿಸಿಕೊಂಡ್ರು. ಅಂದಾಜು ನಾಲ್ಕೂವರೆ ಲಕ್ಷ ಸ್ಕ್ವಯರ್ ಫೀಟ್ ವಿಸ್ತೀರ್ಣದ ಆಸ್ತಿ ವಿವಾದ ಬಹುದಿನಗಳಿಂದ ಸುಪ್ರೀಂಕೋರ್ಟ್ ನಲ್ಲಿ ವಾದ-ಪ್ರತಿವಾದಕ್ಕೆ ಸಾಕ್ಷಿಯಾಗಿದೆ. ಒಟ್ನಲ್ಲಿ ಅಂಬಾನಿ ಕುಟುಂಬದ ಐಷಾರಾಮಿ ಬಂಗಲೆ ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದು ಒಂದೊಮ್ಮೆ ಬೋರ್ಡ್ ಗೆ ಆಸ್ತಿ ವಾಪಸ್ ಅಂತಾ ತೀರ್ಪು ಬಂದರೆ ಮುಂದೇನು ಬಂದ್ರೆ ಮುಂದೇನು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.