ಹೈದರಾಬಾದ್: ಐಪಿಎಲ್ ನಲ್ಲಿ ಇಂದು ಮತ್ತೊಂದು ಹೊಸ ದಾಖಲೆ ಸೃಷ್ಟಿಯಾಗಿದೆ.
ಗುರುವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಲಕ್ನೋ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ (Nicholas Pooran) ಈ ದಾಖಲೆ ಬರೆದಿದ್ದಾರೆ.
ಅವರು ಐಪಿಎಲ್‌ನಲ್ಲಿ (IPL) ವೇಗದ ಅರ್ಧಶತಕ ಸಿಡಿಸಿದ ದಾಖಳೆ ಮಾಡಿದ್ದಾರೆ. ಸನ್ ರೈಸರ್ಸ್ ವಿರುದ್ಧ ಕೇವಲ 18 ಎಸೆತಗಳಲ್ಲಿ 50 ರನ್ ಸಿಡಿಸಿ ಪೂರನ್ ಸಾಧನೆ ಮಾಡಿದ್ದಾರೆ. 4 ರನ್‌ಗೆ 1 ವಿಕೆಟ್ ಕಳೆದುಕೊಂಡಿದ್ದ ವೇಳೆ ಆಗಮಿಸಿದ ಪೂರನ್ ಪೂರನ್ ಬೌಂಡರಿ, ಸಿಕ್ಸ್ ಸಿಡಿಸಿ ತಂಡದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಕೊನೆಗೆ ಪೂರನ್ ಒಬ್ಬರೇ 70 ರನ್ (26 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿದ್ದರು.
2025ರಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು
ಪೂರನ್ (ಎಲ್‌ಎಸ್‌ಜಿ) – 50 ರನ್, 18 ಎಸೆತ
ಮಾರ್ಷ್ (ಎಲ್‌ಎಸ್‌ಜಿ) – 50 ರನ್, 21 ಎಸೆತ
ಹೆಡ್(ಎಸ್‌ಆರ್‌ಹೆಚ್) – 50 ರನ್, 21 ಎಸೆತ
ಆದರೆ, ಐಪಿಎಲ್ ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಯಶಸ್ವಿ ಜೈಸ್ವಾಲ್ ಹೆಸರಿನಲ್ಲಿದೆ. ಜೈಸಸ್ವಾಲ್ 13 ಎಸೆತಗಳಲ್ಲ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅಲ್ಲದೇ, ಕನ್ನಡಿಗ ಕೆ.ಎಲ್. ರಾಹುಲ್ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.