ಬೆಂಗಳೂರು: ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ ಏಪ್ರಿಲ್ 5 ಹಾಗೂ 6 ರಂದು ಅದ್ದೂರಿಯಾಗಿ ನಡೆಯಲಿದ್ದು, ಇಂದು ಥೀಮ್ ಸಾಂಗ್ ಬಿಡುಗಡೆ ಮಾಡಲಾಗಿದೆ.
ನಿರ್ಮಾಪಕ, ನಿರ್ದೇಶಕ, ನಟನಾಗಿ ಹಾಗೂ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಇವೆಂಟ್ ಗಳನ್ನು ಆಯೋಜಿಸುವ ಮೂಲಕ ಜನಪ್ರಿಯರಾಗಿರುವ ನವರಸನ್ “ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್” ಆಯೋಜಿಸುವ ಮೂಲಕ ಕ್ರೀಡಾ ಲೋಕಕ್ಕೂ ಪಾದಾರ್ಪಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ “CWKL” ಲೋಗೊ ಅನಾವರಣವನ್ನು ನವರಸನ್ ಅದ್ದೂರಿಯಾಗಿ ಬಿಡುಗಡೆ ಮಾಡಿದ್ದರು.
ಈಗ ಚಂದನ್ ಶೆಟ್ಟಿ “CWKL” ಗಾಗಿ “ಕಬ್ಬಡಿ ಕಬ್ಬಡಿ” ಎಂಬ ಥೀಮ್ ಸಾಂಗ್ ಬರೆದಿದ್ದು, ಅದನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ “CWKL” ಪಂದ್ಯಗಳು ನಡೆಯುವ ದಿನಾಂಕಗಳನ್ನು ಕೂಡ ತಿಳಿಸಲಾಯಿತು.
ವಿಧಾನ ಪರಷತ್ ಸದಸ್ಯ ಹಾಗೂ ಸಾಯಿಗೋಲ್ಡ್ ಸಂಸ್ಥೆಯ ಮಾಲೀಕ ಶರವಣ ಈ ವೇಳೆ ಮಾತನಾಡಿ, ಪಂದ್ಯಗಳು ನಡೆಯುವ ದಿನಾಂಕಗಳನ್ನು ಘೋಷಿಸಿದರು. ಏಪ್ರಿಲ್ 5 ಹಾಗೂ 6 “CWKL” ನ ಪಂದ್ಯಗಳು ನಡೆಯಲಿವೆ. ಥೀಮ್ ಸಾಂಗ್ ನ್ನು ಪಿ.ಆರ್ ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿದರು.
“ವಾಮನ” ಚಿತ್ರದ ನಿರ್ಮಾಪಕ ಚೇತನ್ ಗೌಡ, ನಿರ್ಮಾಪಕ ಸುರೇಶ್ ಗೌಡ, ನಿರ್ಮಾಪಕ ರಾಜೇಶ್ ಗೌಡ, ನಿರ್ಮಾಪಕ ಗೋವಿಂದರಾಜು ಹಾಗೂ ಗಜೇಂದ್ರ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಲೀಗ್ ನಲ್ಲಿ ಏಳು ತಂಡಗಳಿದ್ದು, ಏಳೂ ತಂಡಗಳ ನಾಯಕಿಯರು ಹಾಗೂ ಆಟಗಾರರು ಭಾಗವಹಿಸಿದ್ದರು.