ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ಇಸ್ರೋದಲ್ಲಿ (ISRO Jobs) ಜ್ಯೂನಿಯರ್ ರಿಸರ್ಚ್ ಫೆಲೊ ಹಾಗೂ ಇಸ್ರೋದ ಹಲವು ಬ್ರ್ಯಾಂಚ್ ಗಳಲ್ಲಿ ಖಾಲಿ ಇರುವ ರಿಸರ್ಚ್ ಅಸೋಸಿಯೇಟ್ಸ್-1 ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ತಾತ್ಕಾಲಿಕವಾಗಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಇಸ್ರೋ ಮುಂದಾಗಿದ್ದು, ಏಪ್ರಿಲ್ 20 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಶೈಕ್ಷಣಿಕ ಅರ್ಹತೆ ಏನು?
ಜ್ಯೂನಿಯರ್ ರಿಸರ್ಚ್ ಫೆಲೊ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಎಂಇ, ಎಂ.ಟೆಕ್ ಅಥವಾ ಎಂಎಸ್ಸಿ ಶಿಕ್ಷಣ ಪಡೆದಿರಬೇಕು. ರಿಸರ್ಚ್ ಅಸೋಸಿಯೇಟ್ಸ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಿಎಚ್.ಡಿ ಅಥವಾ ತತ್ಸಮಾನ ಶಿಕ್ಷಣ ಪಡೆದಿರಬೇಕು. ಇಲ್ಲವೆ ಅಧಿಸೂಚನೆಯಲ್ಲಿ ಪ್ರಸ್ತಾಪಿಸಿದ ವಿಷಯಗಳಲ್ಲಿ ಎಂಇ ಅಥವಾ ಎಂ.ಟೆಕ್ ಕೋರ್ಸ್ ಮುಗಿಸಿರಬೇಕು.
ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
ಮೊದಲಿಗೆ ಅಭ್ಯರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸಬೇಕು. ಇಸ್ರೋದ www.isro.gov.in ವೆಬ್ ಸೈಟ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿ ಶಾರ್ಟ್ ಲಿಸ್ಟ್ ಆದವರಿಗೆ ಸಂದರ್ಶನಕ್ಕೆ ಮಾಹಿತಿ ನೀಡಲಾಗುವುದು. ನಿಗದಿತ ದಿನಾಂಕದಂದು ಅಗತ್ಯ ಮೂಲ ದಾಖಲೆಗಳು, ಜೆರಾಕ್ಸ್ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಬಳಿಕ ನೇಮಕಾತಿ ಆದೇಶ ಹೊರಡಿಸಲಾಗುತ್ತದೆ.
ವಯಸ್ಸಿನ ಅರ್ಹತೆ ಏನು? ಸಂಬಳ ಎಷ್ಟು?
ಜೂನಿಯರ್ ರಿಸರ್ಚ್ ಫೆಲೋ : ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಇರುತ್ತವೆ. ಎಸ್ ಸಿ / ಎಸ್ ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ರಿಸರ್ಚ್ ಅಸೋಸಿಯೇಟ್-1: ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದವರಿಗೆ 3 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಇರುತ್ತವೆ. ಎಸ್ ಸಿ / ಎಸ್ ಟಿ ವರ್ಗದವರಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಜೂನಿಯರ್ ರಿಸರ್ಚ್ ಫೆಲೋ: ಕನಿಷ್ಠ 2 ವರ್ಷದಿಂದ 5 ವರ್ಷದವರೆಗೆ ಫೆಲೋಶಿಪ್ ಇರುತ್ತದೆ. ಫೆಲೋಶಿಪ್ ಸ್ಟೈಪೆಂಡ್ 37 ಸಾವಿರ ರೂ.ನಿಂದ 42 ಸಾವಿರ ರೂ. ಇರುತ್ತದೆ. ರಿಸರ್ಚ್ ಅಸೋಸಿಯೇಟ್ -1: ಕನಿಷ್ಠ 1 ವರ್ಷದಿಂದ 3 ವರ್ಷದವರೆಗೆ ಫೆಲೋಶಿಪ್ ಇರುತ್ತದೆ. ಫೆಲೋಶಿಪ್ ಸ್ಟೈಪೆಂಡ್ ಅನ್ನು ಮಾಸಿಕ 58 ಸಾವಿರ ರೂ.ವರೆಗೆ ನೀಡಲಾಗುತ್ತದೆ.