ಮಂಗಳೂರು: ವಿಶ್ವರಂಗಭೂಮಿ ದಿನಾಚರಣೆ ಹಾಗೂ ಕಲಾಗ್ರಾಮ ಲೋಕಾರ್ಪಣೆ, ಅರೆಹೊಳೆ ರಂಗ ಪುರಸ್ಕಾರ ಪ್ರದಾನ ಸಮಾರಂಭ ಮಾರ್ಚ್ 27ರಂದು ಮಂಗಳೂರಿನ ಬೊಂದೆಲ್, ಮೂಡು ಶೆಡ್ಡೆ ರಸ್ತೆಯಲ್ಲಿನ ಕಲಾಗ್ರಾಮದಲ್ಲಿ ನಡೆಯಲಿದೆ.
ಅಲ್ಲದೇ, ಮಾ. 27ರಿಂದ ಮಾ. 31ರ ವರೆಗೆ ಪ್ರತಿ ದಿನ ಸಂಜೆ 6.45ಕ್ಕೆ ಅರೆಹೊಳೆ ನಾಟಕೋತ್ಸವ ನಡೆಯಲಿದೆ. ಅರೆಹೊಳೆ ರಂಗ ಪುರಸ್ಕಾರ ಪ್ರಶಸ್ತಿಗೆ ಆಸಿಫ್ ಕ್ಷತ್ರಿಯ ಆಯ್ಕೆಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಎಂ.ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅತಿಥಿಗಳಾಗಿ ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿಕಾಪಿಕಾಡ್, ರಂಗಭೂಮಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರಾಜೇಶ್, ನಾಟಕಕಾರ ಫಾದರ್ ಅಲ್ವಿನ್ ಸೇರವೋ, ನೃತ್ಯ ಗುರು ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಕಲಾಭಿ ಸಂಘದ ಅಧ್ಯಕ್ಷ ಸುರೇಶ್ ವರ್ಕಾಡಿ, ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನ ಡಾ. ರಾಘವೇಂದ್ರ ಹೊಳ್ಳ ಭಾಗವಹಿಸಲಿದ್ದಾರೆ.
ಅರೆಹೊಳೆ ನಾಟಕೋತ್ಸವದಲ್ಲಿ ಮಾರ್ಚ್ 27ರಂದು ಕಲಾಭಿ ಥಿಯೇಟರ್ ವತಿಯಿಂದ ಎ ಫ್ರೆಂಡ್ ಬಿಯಾಂಡ್ ದ ಫೈನ್ಸ್, ಮಾ. 28ರಂದು ಆಯನ ನಾಟಕದ ಮನೆ ವತಿಯಿಂದ ಅಶ್ವತ್ಥಾಮ ನಾಟ್ ಔಟ್, ಮಾ. 29ರಂದು ರಂಗರಥ ಟ್ರಸ್ಟ್ ವತಿಯಿಂದ ಇದ್ದಾಗ ನಿಮ್ಮು, ಕದ್ದಾಗ ನಮ್ಮದು, ಮಾ. 30ರಂದು ಬ್ರಹ್ಮಾವರದ ಮಂದಾರ ವತಿಯಿಂದ ಬೆತ್ತಲಾಟ, ಮಾ, 31ರಂದು ಉಡುಪಿಯ ಜ್ಞಾನಂ ಟ್ರಸ್ಟ್ ಹೆಜ್ಜೆಗೊಲಿದ ಬೆಳಕು ನಾಟಕ ಪ್ರಸ್ತುತ ಪಡಿಸಲಾಗುತ್ತಿದೆ.