ಶೃಂಗೇರಿ: ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಪೊಲೀಸರಿಗೆ ಚಾಲೆಂಜ್ ಮಾಡಿ, ಈಗ ಅವರ ಅತಿಥಿಯಾಗಿರುವ ಘಟನೆ ನಡೆದಿದೆ.
ಕುಡುಕನ ಅವಾಂತರದಿಂದಾಗಿ ಶೃಂಗೇರಿ (Sringeri) ಪೊಲೀಸರು ಸುಸ್ತಾಗಿ ಹೋಗಿದ್ದರು. ಆಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರು (Sringeri Police) ರಾತ್ರಿ ಇಡೀ ಪರದಾಟ ನಡೆಸಿದ್ದಾರೆ. ಕುಡುಕನೋರ್ವ ಎಣ್ಣೆ ಎಟಿನಲ್ಲಿ ಶೃಂಗೇರಿ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆಯಾಗಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದ.
ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕೆ ಎಂದು ಶೃಂಗೇರಿಗೆ ಬಂದಿದ್ದ ಮದ್ಯವ್ಯಸನಿ ಬಸವರಾಜ್, ಪೊಲೀಸರಿಗೆ ಕರೆ ಮಾಡಿ, ‘ಶೃಂಗೇರಿ ಬಸ್ ನಿಲ್ದಾಣದಲ್ಲಿ ಗುಂಪು ಘರ್ಷಣೆ ಆಗಿದೆ’ ಎಂದು ಪೊಲೀಸರಿಗೆ ಕರೆ ಮಾಡಿದ್ದಾನೆ. ಅಲ್ಲದೇ, ಅಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ, ‘ಗುಂಪು ಘರ್ಷಣೆಯಲ್ಲಿ ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣವೇ ಬನ್ನಿ’ ಎಂದಿದ್ದಾನೆ. ಕೂಡಲೇ ಆಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಬಂದವರಿಗೆ ಶಾಕ್ ಆಗಿದೆ. ಅಲ್ಲಿ ಯಾವುದೇ ಗುಂಪು ಘರ್ಷಣೆ ಆಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಆನಂತರ ಪೊಲೀಸರು ಆತನಿಗೆ ಕರೆ ಮಾಡಿದ್ದಾರೆ. ಆಗ, ‘ಭೂಮಿ ಮೇಲೆ ಆಕಾಶದ ಕೆಳಗಿದ್ದೇನೆ. ತಾಕತ್ತಿದ್ದರೆ ನನ್ನನ್ನು ಹುಡುಕಿ’ ಎಂದು ಸವಾಲು ಹಾಕಿದ್ದಾನೆ. ಆರೋಪಿ ಬಂಧಿಸಿದ್ದ ಪೊಲೀಸರು ಬುದ್ಧಿ ಹೇಳಿ ಬಿಟ್ಟಿದ್ದಾರೆ.



















