ಬೆಂಗಳೂರು: ವಿದ್ಯುತ್ ಕಂಬ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ನಗರದ ಸುದ್ದುಗುಟ್ಟೆ ಪಾಳ್ಯದಲ್ಲಿ ನಡೆದಿದೆ.
ಸುಮತಿ ಹಾಗೂ ಬಿಹಾರ ಮೂಲತ ಸೋನಿ ಕುಮಾರಿ ಸಾವನ್ನಪ್ಪಿರುವ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತ ಸೋನಿ ಕುಮಾರಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಅವರು ಕಳೆದ 8 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲಿಯೇ ನೆಲೆಸಿದ್ದರು.
ಸುಮತಿ ಗಂಡ ತಮಿಳುನಾಡು ಮೂಲದರಾಗಿದ್ದು ಸುದ್ದುಗುಂಟೆಪಾಳ್ಯದಲ್ಲಿ ವಾಸ ಮಾಡುತ್ತಿದ್ದರು. ಸುಮತಿಗೆ ಇಬ್ಬರು ಮಕ್ಕಳಿದ್ದಾರೆ. ಸೋನಿ ಕುಮಾರಿಗೆ ಕೂಡ ಇಬ್ಬರು ಮಕ್ಕಳು. ಸುಮತಿ ಹಾಗೂ ಸೋನಿ ಮಕ್ಕಳನ್ನು ಟ್ಯೂಷನ್ ನಿಂದ ಕರೆದುಕೊಂಡು ಹೋಗುತ್ತಿದ್ದರು. ಜೆಸಿಬಿ ಟಚ್ ಆಗಿ ಕರೆಂಟ್ ಕಂಬ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬ ಬೀಳುವುದನ್ನು ಗಮನಿಸಿದ ತಾಯಂದಿರು ಮಕ್ಕಳನ್ನು ರಕ್ಷಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ಮಕ್ಕಳ ರಕ್ಷಣೆಯಾಗಿದೆ. ಮತ್ತಿಬ್ಬರು ಕೂಡ ಗಾಯಗೊಂಡಿದ್ದಾರೆ.