ಬೆಂಗಳೂರು: ಇಡೀ ಸಮಾಜವೇ ತಲೆ ತಗ್ಗಿಸುವಂತಹ ವಿಷಯವೊಂದು ಹೊರ ಬಿದ್ದಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಮಕ್ಕಳು ಗರ್ಭಿಣಿಯರಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ 26 ಸಾವಿರಕ್ಕೂ ಅಧಿಕ ಮಕ್ಕಳು ಗರ್ಭಿಣಿಯರಾಗಿದ್ದಾರೆಂದು ಅಂಕಿ-ಅಂಶ ಹೇಳುತ್ತಿದೆ.
2024ರ ಏಪ್ರಿಲ್ ನಿಂದ 2025ರ ಫೆಬ್ರವರಿ ವರೆಗೆ ರಾಜ್ಯದಲ್ಲಿ 26,436 ಬಾಲೆಯರು ಗರ್ಭಿಣಿಯರಾಗಿದ್ದಾರೆ ಎಂಬ ಆಘಾತಕಾರಿ ಅಂಕಿ-ಅಂಶ ಹೊರ ಬಿದ್ದಿದೆ.
ರಾಜ್ಯದ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 26,363 ಬಾಲೆಯರು ಗರ್ಭಿಣಿಯರಾಗಿದ್ದಾರೆ.
ಇನ್ನುಳಿದಂತೆ ಚಿಕ್ಕಬಳ್ಳಾಪುರ, ಮೈಸೂರು, ಧಾರವಾಡ, ದಾವಣಗೆರೆ, ಹಾಸನದಲ್ಲಿ ಇಂತಹ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಇಷ್ಟೊಂದು ಸಂಖ್ಯೆಯಲ್ಲಿ ಬಾಲಕಿಯರು ಗರ್ಭಿಣಿಯರಾಗಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನು ಮಾಡುತ್ತಿದೆ? ಮಕ್ಕಳ ರಕ್ಷಣಾ ಇಲಾಖೆಗಳು ಏನು ಮಾಡುತ್ತಿವೆ? ಸರಿಯಾದ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲವೇ? ಅಥವಾ ಆಧುನಿಕತೆಯ ಹೆಸರಿನಲ್ಲಿ ಹೆಣ್ಣು ಮಕ್ಕಳು ಹಾಳಾಗುತ್ತಿದ್ದಾರಾ? ಪೋಷಕರು ಮಕ್ಕಳ ಜವಾಬ್ದಾರಿ ಮರೆತರಾ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತಿವೆ.
5 ವರ್ಷಗಳಲ್ಲಿನ ಅಂಕಿ-ಅಂಶ ಗಮನಿಸುವುದಾದರೆ…
2020-21 -42,120.
2021-22-44,631.
2022-23-49,875.
2023-24-39,606.
2024-25-26,436. ಇಷ್ಟು ಪ್ರಕರಣಗಳಲ್ಲಿ ಬಾಲ ಹೆಣ್ಣು ಮಕ್ಕಳು ಗರ್ಭ ಧರಿಸಿದ್ದು, ಇದು ನಿಜಕ್ಕೂ ಆತಂಕಕಾರಿ ವಿಷಯವೇ ಸರಿ.