ಬೆಳಗಾವಿ: ಪ್ರಕರಣವೊಂದರಲ್ಲಿ ಅನೈತಿಕ ಸಂಬಂಧ (Illicit Relationship)ದಿಂದಾಗಿ ಪುತ್ರ ಹಾಗೂ ಮೈದುನನ ಹೆಂಡತಿ ಕೊಲೆ ಮಾಡಿದ್ದ ತಾಯಿ (Mother) ಹಾಗೂ ಪ್ರಿಯಕರನಿಗೆ (Lover) ಕೋರ್ಟ್ ಜೀವಾವಧಿ ಶಿಕ್ಷೆ (Life Imprisonment) ನೀಡಿದೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಈ ಘಟನೆ ನಡೆದಿತ್ತು. ಈಗ ಜೀವಾವಧಿ ಶಿಕ್ಷೆ ವಿಧಿಸಿ ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಸುಧಾ ಸುರೇಶ ಕರಿಗಾರ (32), ಪ್ರಿಯಕರ ರಾಮಪ್ಪ ಅಲಿಯಾಸ್ ರಮೇಶ ಕೆಂಚಪ್ಪ ಬಸ್ತವಾಡೆ (25) ಶಿಕ್ಷೆಗೆ ಗುರಿಯಾದವರು.
ಅಕ್ರಮ ಸಂಬಂಧಕ್ಕಾಗಿ ಬಾವಿಗೆ ದೂಕಿ ಸ್ವಂತ ಮಗನನ್ನು (Son) ಹಾಗೂ ಮಹಿಳೆಯನ್ನು ಬೆಂಕಿ ಹಚ್ಚಿ ಸುಟ್ಟಿರುವ ಆರೋಪದ ಮೇಲೆ ಸುಧಾ ಕರಿಗಾರ ಹಾಗೂ ಪ್ರಿಯಕರ ರಮೇಶ ಬಸ್ತವಾಡೆಗೆ ಶಿಕ್ಷೆ ವಿಧಿಸಲಾಗಿದೆ.
2019 ಡಿ.9ರಂದು ನಡೆದ ಭಾಗ್ಯಶ್ರೀ ಕೊಲೆ ಪ್ರಕರಣದಲ್ಲಿ ಈ ಇಬ್ಬರನ್ನೂ ದೋಷಿ ಎಂದಿರುವ ಕೋರ್ಟ್, ಜೀವಾವಧಿ ಶಿಕ್ಷೆ ಹಾಗೂ 2.10 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಸರ್ಕಾರಿ ಅಭಿಯೋಜಕರಾಗಿ ವೈ.ಜಿ.ತುಂಗಳ ವಾದ ಮಂಡಿಸಿದ್ದರು.