ಮುಂಬಯಿ: “ವಿಷ್ಣು ಸರ್ಕಲ್”, “ಮೆಜೆಸ್ಟಿಕ್ 2” ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ನಟಿ ಸಂಹಿತಾ ವಿನ್ಯಾ ಬಾಲಿವುಡ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.
ಸಂಹಿತಾ ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಬಾಲಿವುಡ್ ನ ಪ್ರಶಸ್ತಿ ಸಮಾರಂಭ “IIFA 2025” ನಲ್ಲಿ ಅತಿಥಿಯಾಗಿ ಭಾಗಿಯಾಗಿದ್ದಾರೆ. ವಸ್ತ್ರ ವಿನ್ಯಾಸಕ ಫಾರೆವರ್ ನವೀನ್ ಕುಮಾರ್ ಅವರು ಸಿದ್ದಪಡಿಸಿದ ವಿನೂತನ ಉಡುಗೆಯಲ್ಲಿ ಸಂಹಿತಾ ವಿನ್ಯಾ IIFA 2025 ಗ್ರೀನ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ.
“IIFA 2025” ಬಾಲಿವುಡ್ ನ ದೊಡ್ಡ ಪ್ರಶಸ್ತಿ ಸಮಾರಂಭ. ಅದರಲ್ಲೂ ಬಾಲಿವುಡ್ ನ ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್(IIFA) ಗೆ ಇದು 25ನೇ ವರ್ಷ. ಈ ಸಮಾರಂಭದಲ್ಲಿ ಬಾಲಿವುಡ್ ಖ್ಯಾತ ಕಲಾವಿದರಾದ ಶಾರುಖ್ ಖಾನ್, ಮಾಧುರಿ ದೀಕ್ಷಿತ್ ಸೇರಿದಂತೆ ಹಲವರು ಭಾಗವಹಿಸಿದ್ದರು.