ನವದೆಹಲಿ: ನಾಡಿನಾದ್ಯಂತ ಸಂಭ್ರಮದಿಂದ ಹೋಳಿ ಹಬ್ಬ (Holi) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೋಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಸಂತೋಷದಿಂದ ತುಂಬಿರುವ ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಉತ್ಸಾಹ ತುಂಬಲಿ. ದೇಶವಾಸಿಗಳಲ್ಲಿ ಏಕತೆಯ ಬಣ್ಣವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಬರೆದುಕೊಂಡು ಶುಭಾಶಯ ತಿಳಿಸಿದ್ದಾರೆ.
ದೇಶದೆಲ್ಲೆಡೆ ಹೋಳಿಯ ಸಂಭ್ರಮ ಮನೆ ಮಾಡಿದೆ. ಹಿಂದೂ ಹಬ್ಬಗಳಲ್ಲಿ ಹೋಳಿ ಸಹ ಒಂದು. ಈ ಹಿನ್ನೆಲೆಯಲ್ಲಿ ಜನರು ಹೋಳಿಯಲ್ಲಿ ಮಿಂದೇಳುತ್ತಿದ್ದಾರೆ.